ಧೂಳಿನ ವಿಚಾರದಲ್ಲಿ ಜೆಸಿಬಿ ಮಾಲಕನನ್ನೇ ಚಾಕುವಿನಿಂದ ಇರಿದು ಕೊಲೆಗೈದ ವ್ಯಕ್ತಿ
ಬೆಂಗಳೂರು: ತಲಘಟ್ಟಪುರ ಠಾಣೆ ವ್ಯಾಪ್ತಿಯ ಹೆಮ್ಮಿಗೆಪುರದಲ್ಲಿ ಶುಕ್ರವಾರ ತಡರಾತ್ರಿ ಧೂಳಿನ ವಿಚಾರದಲ್ಲಿ ಜೆಸಿಬಿ ಮಾಲೀಕನನ್ನು ಪರಿಚಯಸ್ಥನೇ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ.
ಹೆಮ್ಮಿಗೆಪುರ ನಿವಾಸಿ ಎಚ್.ಎಸ್. ಲಿಂಗ ಮೂರ್ತಿ(48) ಕೊಲೆಯಾದವರು. ಈ ಸಂಬಂಧ ಲಿಂಗಮೂರ್ತಿ ಸಹೋದರ ಗೋವಿಂದರಾಜು ದೂರು ನೀಡಿದ್ದು ಹೆಮ್ಮಿಗೆಪುರ ನಿವಾಸಿ ಚಿರಂಜೀವಿ ಅಲಿಯಾಸ್ ಚಿರಿ (40) ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.





