November 21, 2024

ಬರ್ತಡೇಗಾಗಿ Onlineನಲ್ಲಿ ತರಿಸಿದ್ದ ಕೇಕ್ ತಿಂದು ಬಾಲಕಿ ಸಾವು

0

ಚಂಡೀಗಢ: ಬರ್ತಡೇ ಗಾಗಿ ಆನ್ ಲೈನ್ ನಲ್ಲಿ ತರಿಸಿದ್ದ ಕೇಕ್ ತಿಂದು 10 ವರ್ಷದ ಬಾಲಕಿಯೊಬ್ಬಳು ಸಾವನಪ್ಪಿದ ಘಟನೆ ಪಂಜಾಬ್‌ನಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಮಾನ್ವಿ (10) ಎಂದು ಗುರುತಿಸಲಾಗಿದೆ. ಬಾಲಕಿಯ ಹುಟ್ಟುಹಬ್ಬಕ್ಕೆಂದು ಪಟಿಯಾಲದ ಬೇಕರಿಯಿಂದ ಆನ್‌ಲೈನ್‌ ಮೂಲಕ ಕುಟುಂಬದವರು ಕೇಕ್‌ ಆರ್ಡರ್‌ ಮಾಡಿ ತರಿಸಿದ್ದರು.

ಸಂಜೆ 7 ಗಂಟೆ ಹೊತ್ತಿಗೆ ಮಾನ್ವಿ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು. ಅದೇ ದಿನ ರಾತ್ರಿ 10 ಗಂಟೆಯ ಹೊತ್ತಿಗೆ ಇಡೀ ಕುಟುಂಬ ಆನಾರೋಗ್ಯಕ್ಕೆ ತುತ್ತಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು ಎಂದು ಕುಟುಂಬ ಸದಸ್ಯರೊಬ್ಬರು ಹೇಳಿದ್ದಾರೆ.

ಮಾನ್ವಿ ಕೂಡ ತೀರಾ ಬಾಯಾರಿಕೆಯಿಂದ ಆಗಾಗ ನೀರು ಕುಡಿಯುತ್ತಿದ್ದಳು, ಬಳಿಕ ನಿದ್ದೆಗೆ ಜಾರಿದ್ದಳು, ಮರುದಿನ ಬೆಳಿಗ್ಗೆ ಮಾನ್ವಿ ಆರೋಗ್ಯ ಹದಗೆಟ್ಟ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿಲಾಗಿತ್ತು.

ವೆಂಟಿಲೇಟರ್‌ನಲ್ಲಿ ಮಾನ್ವಿಯನ್ನು ಇಡಲಾಗಿತ್ತು. ಇಸಿಜಿ ಸೇರಿದಂತೆ ಇನ್ನಿತರ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಿದರೂ ಆಕೆ ಬದುಕುಳಿಯಲಿಲ್ಲ ಎಂದು ಮಾನ್ವಿ ತಾತ ಹರ್ಬನ್‌ ಲಾಲ್‌ ತಿಳಿಸಿರುವುದಾಗಿ ವರದಿಯಾಗಿದೆ.

ಕೇಕ್‌ನಲ್ಲಿ ವಿಷದ ಅಂಶವನ್ನು ಬೆರೆಸಲಾಗಿತ್ತು ಎಂದು ಕುಟುಂಬ ದೂರಿದೆ. ಸದ್ಯ ಘಟನೆ ಸಂಬಂಧ ಸ್ಥಳೀಯ ಪೊಲೀಸರು ಕೇಕ್‌ ಅಂಗಡಿ ಮಾಲೀಕನ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!