ಕುಡಿಯುವ ನೀರಿನ ವಿಚಾರಕ್ಕೆ ನಡೆದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

ಯಾದಗಿರಿ: ಕುಡಿಯುವ ನೀರಿನ ವಿಚಾರಕ್ಕೆ ಸಹೋದರ ಸಂಬಂಧಿಗಳ ನಡುವೆ ಶುರುವಾದ ಜಗಳ ಯುವಕನ ಹತ್ಯೆಯಲ್ಲಿ ಅಂತ್ಯವಾಗಿರುವುದು ಹುಣಸಗಿಯಲ್ಲಿ ನಡೆದಿದೆ.
ನಗರದ ನಂದಕುಮಾರ್ ಕಟ್ಟಿಮನಿ (21) ಕೊಲೆಯಾದ ಯುವಕ. ನಂದಕುಮಾರ್‌ನ ಚಿಕ್ಕಪ್ಪನ ಮಗ ಹನುಮಂತ ಹಾಗೂ ಆತನ ತಾಯಿ ಹನುಮವ್ವ ಕೊಲೆಗೈದ ಆರೋಪಿಗಳಾಗಿದ್ದಾರೆ. ಇಬ್ಬರ ಮನೆಯ ಬಳಿ ಸರ್ಕಾರದ ಕುಡಿಯುವ ನೀರಿನ ನಲ್ಲಿ ಇದೆ.
ಈ ನೀರನ್ನು ಎರಡೂ ಕುಟುಂಬದವರೂ ಬಳಸಿಕೊಳ್ಳುತ್ತಿದ್ದರು. ಎಂದಿನಂತೆ ಇಂದು ಸಹ ಹತ್ಯೆಯಾದ ನಂದಕುಮಾರ್‌ನ ಅಜ್ಜಿ ನೀರಿಗೆ ಹೋಗಿದ್ದಾಗ ಎರಡೂ ಕುಟುಂಬದ ನಡುವೆ ಜಗಳವಾಗಿದೆ. ಇದೇ ವಿಚಾರಕ್ಕೆ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ