ವಿಟ್ಲ: ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅ.ಕ್ರ ನಂಬ್ರ 127/2015 ಕಲಂ: 457,380. IPC ಪ್ರಕರಣದಲ್ಲಿ ಕಾಸರಗೋಡಿನ ಆರೋಪಿಯಾದ ಇಬ್ರಾಹಿಂ ಮುಜಾಂಬಿಲ್ (28) ಎಂಬಾತನು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು.
ಆತನನ್ನು ದಿನಾಂಕ 27/3/24 ರಂದು ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕಿ ವಿಧ್ಯಾ ಮತ್ತು ಸಿಬ್ಬಂದಿಯವರಾದ ASI ಜಯರಾಮ, PC ಆಶೋಕ ಹಾಗೂ HC ರಾಧಾಕೃಷ್ಣ (ಪುತ್ತೂರು ನಗರ ಠಾಣೆ ) ರವರುಗಳ ತಂಡ, ಪುತ್ತೂರು ನಗರದ ಮಾರ್ಕೆಟ್ ರಸ್ತೆಯಲ್ಲಿ ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ದಿನಾಂಕ 08-04-24ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿರುತ್ತದೆ.
ಈತನ ವಿರುದ್ದ
- ವಿಟ್ಲ ಠಾಣೆಯಲ್ಲಿ-02
- ಕೇರಳ ಮಂಜೇಶ್ವರ ಠಾಣೆಯಲ್ಲಿ-01
- ಪುತ್ತೂರು ನಗರ ಠಾಣೆ-01
- ಅಂಧ್ರಪ್ರದೇಶದ ವಿಶಾಖಪಟ್ಟಣ ಠಾಣೆ-01 ಪ್ರಕರಣಗಳು ದಾಖಲಾಗಿರುತ್ತದೆ.




