December 18, 2025

ತುಮಕೂರು: ಬೆಳ್ತಂಗಡಿಯ ಮೂವರ ಸಜೀವ ದಹನ ಪ್ರಕರಣ: ಮೃತರ ಮನೆಗೆ ಎಸ್‌ಡಿಪಿಐ ಮುಖಂಡರ ಭೇಟಿ

0
IMG-20240325-WA0001.jpg

ಬೆಳ್ತಂಗಡಿ: ತುಮಕೂರುನಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮೃತ ಪಟ್ಟ ಬೆಳ್ತಂಗಡಿ ತಾಲೂಕಿನ ಟಿ.ಬಿ ಕ್ರಾಸ್ ನಿವಾಸಿ ಸಾಹುಲ್ ಹಮೀದ್, ಮದ್ದಡ್ಕ ನಿವಾಸಿ ಇಸಾಕ್, ಶಿರ್ಲಾಲ್ ನಿವಾಸಿ ಇಮ್ತಿಯಾಝ್ ಅವರ ಮನೆಗೆ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಿಯಾಝ್ ಫರಂಗಿಪೇಟೆ ಈ ಪ್ರಕರಣದಲ್ಲಿ ಯಾವುದೇ ಕಾರಣವಿಲ್ಲದೆ ಸಾಮೂಹಿಕ ಹತ್ಯೆ ಮಾಡುವ ಮೂಲಕ ದರೋಡೆ ಮತ್ತು ಡಕಾಯಿತಿ ನಡೆಸುವುದು ಅಪರಾಧಿಗಳ ಏಕೈಕ ಉದ್ದೇಶವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂತಹ ಕ್ರೂರ ಕ್ರತ್ಯ ನಡೆಯುವಾಗ ದ.ಕ ಜಿಲ್ಲೆಯ ರಾಜಕಾರಣಿಗಳು ಹಾಗು ಪ್ರಮುಖ ರಾಜಕೀಯ ಪಕ್ಷಗಳ ನೇತಾರರು ಘಟನಾ ಸ್ಥಳಕ್ಕೆ ಬೇಟಿಯಾಗದೆ, ಕಣ್ಣಿದ್ದು ಕುರುಡರ ವರ್ತನೆ ನಟಿಸಿ ಮೌನ ಪಾಲಿಸಿದ್ದಾರೆ. ರಾಜ್ಯದಲ್ಲಿ ಇಂತಹ ಘಟನೆ ನಡೆಯುವಾಗ ಮಾನ್ಯ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಹಾಗು ಇತರ ಅಧಿಕಾರಿಗಳು ಯಾವುದೇ ಖಂಡನೆ ಅಥವಾ ಸೂಕ್ತವಾದ ತನಿಖೆ ನಡೆಸುವ ಭರವಸೆಯನ್ನು ನೀಡದೆ ಇರುವುದು ಅತ್ಯಂತ ಬೇಸರದ ಸಂಗತಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷರಾದ ಅನ್ವರ್ ಸದಾತ್ ಬಜತ್ತೂರು, ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು, ಜಿಲ್ಲಾ ಕಾರ್ಯದರ್ಶಿಗಾಳದ ಅಕ್ಬರ್ ಬೆಳ್ತಂಗಡಿ, ಜಮಾಲ್ ಜೋಕಟ್ಟೆ, ಸುಹೈಲ್ ಖಾನ್, ಬಂಟ್ವಾಳ ಕ್ಷೇತ್ರಾಧ್ಯಕ್ಷರಾದ ಮುನೀಶ್ ಆಲಿ, ಬೆಳ್ತಂಗಡಿ ಕ್ಷೇತ್ರಾಧ್ಯಕ್ಷರಾದ ನವಾಝ್ ಕಟ್ಟೆ ಲ್, ಸಮಿತಿ ಸದಸ್ಯರಾದ ಅಬ್ದುಲ್ ಅಝೀಝ್ ಝುಹರಿ ಕಿಲ್ಲೂರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!