ಬೆಳ್ತಂಗಡಿ: ಎದೆನೋವಿನಿಂದ ಕ್ಷೌರಿಕ ಮೃತ್ಯು
ಬೆಳ್ತಂಗಡಿ: ಮುಂಡಾಜೆ ಗ್ರಾಮದ ಸೋಮಂತಡ್ಕ ನಿವಾಸಿ, ಪ್ರಸ್ತುತ ಉಜಿರೆಯಲ್ಲಿ ನೆಲೆಸಿದ್ದ ರಾಧಾಕೃಷ್ಣ ಭಂಡಾರಿ (49) ಅವರು ಕ್ಷೌರಿಕ ವೃತ್ತಿಯಲ್ಲಿರುವಾಗಲೇ ಎದೆನೋವು ಆರಂಭವಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಉಜಿರೆಯ ಪ್ರಸಿದ್ಧ ರಾಜ್ ಹೇರ್ ಡ್ರೆಸ್ಸಸ್ ಸಂಸ್ಥೆಯ ಮಾಲಕರಾಗಿರುವ ದೇವರಾಜ ಭಂಡಾರಿ ಮತ್ತು ರತ್ನಾವತಿ ದಂಪತಿಯ ಪುತ್ರನಾಗಿರುವ ಮೃತರು ತಂದೆಯ ಜತೆಗೆ ದೀರ್ಘ ಕಾಲ ಕ್ಷೌರಿಕ ವೃತ್ತಿ ನಡೆಸುತ್ತಿದ್ದರು. ಬಳಿಕ ಕೆಲವು ವರ್ಷಗಳಿಂದ ಆರ್.ಕೆ. ಸೆಲೂನ್ ಎಂಬ ಸ್ವಂತ ಅಂಗಡಿ ಹೊಂದಿ ವೃತ್ತಿ ಮುಂದುವರಿಸಿದ್ದರು ಜತೆಗೆ ಉಜಿರೆ ಪೇಟೆಯಲ್ಲಿ ಆರ್.ಕೆ. ಬೇಕರಿ ಕೂಡ ಹೊಂದಿದ್ದರು.





