ಮಡಿಕೇರಿ: ಪ್ರವಾಸಿಗಳಿದ್ದ ಕಾರಿನ ಮೇಲೆ ಕಾಡಾನೆ ದಾಳಿ, ಕೂದಲೆಳೆಯ ಅಂತರದಲ್ಲಿ ಪಾರು
ಮಡಿಕೇರಿ : ಪಳಗಿದ ಆನೆಗಳನ್ನು ನೋಡಲು ಹೋದ ಪ್ರವಾಸಿ ದಂಪತಿ ಕಾರಿನ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಮಡಿಕೇರಿಯಲ್ಲಿ ನಡೆದಿದ್ದು ದಂಪತಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಮಡಿಕೇರಿಯ ದುಬಾರೆ ಕ್ಯಾಂಪ್‌ಗೆ ತೆರಳುತ್ತಿದ್ದ ಪ್ರವಾಸಿ ಕಾರಿನ ಮೇಲೆ ಕಾಡಾನೆ ದಾಳಿ ಮಾಡಿದ್ದು ವಾಹನಕ್ಕೆ ಹಾನಿಯಾಗಿದೆ. ಮಡಿಕೇರಿಗೆ ಭೇಟಿ ನೀಡಿದ್ದ ಬೆಂಗಳೂರಿನ ದಂಪತಿ ದುಬಾರೆ ಆನೆ ಶಿಬಿರದ ಕಡೆಗೆ ಟ್ಯಾಕ್ಸಿಯಲ್ಲಿ ತೆರಳುತ್ತಿದ್ದರು.
ಈ ವೇಳೆ ಚೆಟ್ಟಳ್ಳಿಯಿಂದ ದುಬಾರೆಗೆ ತೆರಳುತ್ತಿದ್ದಾಗ ಅರಣ್ಯದ ಅಂಚಿನಿಂದ ರಸ್ತೆಗೆ ಕಾಡಾನೆಯೊಂದು ಏಕಾಏಕಿ ದಾಳಿ ಮಾಡಿದೆ. ಟ್ಯಾಕ್ಸಿ ಚಾಲಕ ಹಾಗೂ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾದರೆ ದಾಳಿಯಲ್ಲಿ ಕಾರು ಜಖಂಗೊಂಡಿದೆ.





