ವಿದ್ಯಾರ್ಥಿನಿಯರಿಗೆ ಕಿರುಕುಳ: ಪಿಎಸ್ಸೈ ವಿರುದ್ಧ ದೂರು ದಾಖಲು
ಚಾಮರಾಜನಗರ: ಪಿಎಸ್ಐನಿಂದಲೇ ವಿದ್ಯಾರ್ಥಿನಿಯರಿಗೆ ಕಿರುಕುಳ ಆರೋಪ ಕೇಳಿ ಬಂದಿದೆ.
ಪಿಎಸ್ಐ ಜಗದೀಶ್ ಎಂಬಾತ ಫೋಟೋ ಕಳಿಸಿ ವಿದ್ಯಾರ್ಥಿನಿಯರನ್ನು ಮಂಚಕ್ಕೆ ಕರೆಯುತ್ತಾನೆ ಎಂಬ ಬಗ್ಗೆ ದೂರು ದಾಖಲಾಗಿದ್ದು ಚಾಮರಾಜನಗರ ಎಸ್ಪಿ ಕಚೇರಿಗೆ ತನಿಖೆ ನಡೆಸುವಂತೆ ಐಜಿ ಕಚೇರಿಯಿಂದ ತಾಕೀತು ಬಂದಿದೆ.
ಸದ್ಯ ಚಾಮರಾಜನಗರ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಚಾಮರಾಜನಗರ ಡಿವೈಎಸ್ಪಿಗೆ ತನಿಖೆ ಹೊಣೆ ನೀಡಿದ್ದಾರೆ.





