ಕತ್ತು ಹಿಸುಕಿ ಮಗಳನ್ನು ಕೊಲೆ ಮಾಡಿದ ತಾಯಿ
ಹೈದರಾಬಾದ್: ಮಗಳು ಮನೆಯಲ್ಲಿ ತನ್ನ ಬಾಯ್‌ಫ್ರೆಂಡ್ ಜೊತೆ ಇರುವುದನ್ನು ಕಂಡು ಕೋಪಗೊಂಡ ತಾಯಿ, ಮಗಳನ್ನು ಹತ್ಯೆ ಮಾಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಇಬ್ರಾಹಿಂಪಟ್ಟಣದ ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಗಳು ಭಾರ್ಗವಿ ತನ್ನ ಪ್ರಿಯಕರನೊಂದಿಗೆ ಇರುವುದನ್ನು ಜಂಗಮ್ಮ ನೋಡಿದ್ದಾರೆ. ಇದರಿಂದ ಕೋಪಗೊಂಡು ತಾಯಿ ಕತ್ತು ಹಿಸುಕಿ ಮಗಳ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.





