September 25, 2026

ಸೌದಿ ಅರೇಬಿಯಾದಲ್ಲಿ ಭೀಕರ ಕಾರು ಅಪಘಾತ: ಮಂಗಳೂರು ಮೂಲದ ದಂಪತಿ, ಮಗು ಸೇರಿ ನಾಲ್ವರು ಮೃತ್ಯು

0
image_editor_output_image-1721553784-1711011042408.jpg

ಮಂಗಳೂರು: ಸೌದಿ ಅರೇಬಿಯಾದ ತಾಯಿಫ್ ಬಳಿ ನಡೆದ ಭೀಕರ ಕಾರು ಅಪಘಾತದಲ್ಲಿ ಮಂಗಳೂರು ಹೊರವಲಯದ ಹಳೆಯಂಗಡಿ ಮೂಲದ ದಂಪತಿ, 3 ತಿಂಗಳ ಮಗು ಸೇರಿ ನಾಲ್ವರು ಮೃತಪಟ್ಟಿದ್ದಾರೆ.

ಕತಾರ್‌ನಿಂದ ಸೌದಿ ಅರೇಬಿಯಕ್ಕೆ ಉಮ್ರಾ ನಿರ್ವಹಿಸಲು ಕಾರಿನಲ್ಲಿ ಮಗುವಿನೊಂದಿಗೆ ದಂಪತಿ ತೆರಳುತ್ತಿದ್ದಾಗ ಗುರುವಾರ ಮುಂಜಾನೆ ಸುಮಾರು ನಾಲ್ಕು ಗಂಟೆ ಹೊತ್ತಿಗೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

 

ದುರ್ಘಟನೆಯ ಮಹಿತಿ ಸಿಕ್ಕಿದ ಕೂಡಲೇ ಸ್ಥಳೀಯ ಅಧಿಕಾರಿಗಳು ಘಟನನಾ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಗಳನ್ನ ಕೈಗೊಂಡಿದ್ದಾರೆ.

ಅಫಘಾತ ತಾಯಿಫ್ ನಿಂದ ಸುಮಾರು 160 ಕಿಲೋ ಮೀಟರ್ ದೂರಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಳೆಯಂಗಡಿ ತೋಕೂರು ಸರಕಾರಿ ಶಾಲೆಯ ಪಕ್ಕದ ಕುಟುಂಬದ ಮೂಲ ಮನೆಯಲ್ಲಿ ಇದೀಗ ನೀರವ ಮೌನ ಆವರಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!