September 25, 2026

ಪುತ್ತೂರು: BJP ಅವಧಿಯ ಅನುದಾನಗಳನ್ನು ನನ್ನದೆಂದು ಶಾಸಕ ಅಶೋಕ್ ಕುಮಾರ್ ರೈ ಬಿಂಬಿಸುತ್ತಿದ್ದಾರೆ: ಮಾಜಿ ಶಾಸಕ ಸಂಜೀವ ಮಠಂದೂರು ಆಕ್ರೋಶ

0
image_editor_output_image1874798475-1711011936598.jpg

ಪುತ್ತೂರು: ಶಾಸಕನಾಗಿದ್ದಾಗ ನಾನು ತಂದ ಅನುದಾನಗಳನ್ನು ನನ್ನದೆಂದು ಶಾಸಕ ಅಶೋಕ್ ಕುಮಾರ್ ರೈ ಬಿಂಬಿಸುತ್ತಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ರೈ ವಿರುದ್ದ ಮಾಜಿ ಶಾಸಕ ಸಂಜೀವ ಮಠಂದೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುತ್ತೂರಿನಲ್ಲಿ ಮಾತನಾಡಿದ ಅವರು, ಅದಲ್ಲದೆ ಸುಳ್ಳು ದಾಖಲೆಗಳೊಂದಿಗೆ ಬಿಜೆಪಿ ಕಾರ್ಯಕರ್ತರ ಮನೆಗೆ ನುಗ್ಗಿ ಗೂಂಡಾಗಿರಿ ಪ್ರದರ್ಶನ ನಡೆಸಲು ಶಾಸಕರು ತಮ್ಮ ಬೆಂಬಲಿಗರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದರು.

 

ಕಾಂಗ್ರೇಸ್ ಶಾಸಕ ತಾನು ಶಾಸಕನಾದ ಒಂದು ವರ್ಷದಲ್ಲಿ ಪುತ್ತೂರಿಗೆ 1400 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ತಿರುಗುತ್ತಿದ್ದಾರೆ, ಆದರೆ ಎಲ್ಲಾ ಅನುದಾನಗಳೂ ಕೇಂದ್ರ ಸರಕಾರದ್ದಾಗಿದೆ. ಎಲ್ಲಾ ಅನುದಾನಗಳೂ ಬಿಜೆಪಿ ಸರಕಾರವೇ ಬಿಡುಗಡೆ ಮಾಡಿರುವುದಾಗಿದೆ ಎಂದು ದಾಖಲೆಗಳನ್ನು ಮಾಜಿ ಶಾಸಕ ಸಂಜೀವ ಮಠಂದೂರು ಬಿಡುಗಡೆ ಮಾಡಿದರು.

Leave a Reply

Your email address will not be published. Required fields are marked *

You may have missed

error: Content is protected !!