ಭೀಕರ ರಸ್ತೆ ಅಪಘಾತ: ಖ್ಯಾತ ನಟಿಗೆ ಗಂಭೀರ ಗಾಯ
ತಿರುವನಂತಪುರಂ: ಭೀಕರ ಅಪಘಾತ ಸಂಭವಿಸಿ ಖ್ಯಾತ ನಟಿಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ಆಗಿದೆ.
ತಮಿಳು ಮತ್ತು ಮಲಯಾಳಂ ನಟಿ ಅರುಂಧತಿ ನಾಯರ್ ಅಪಘಾತಕ್ಕೆ ಒಳಗಾಗಿರುವ ನಟಿ. ಗುರುವಾರ ರಾತ್ರಿ(ಮಾ.14 ರಂದು) ಕೋವಲಂ ಬೈಪಾಸ್‌ನಲ್ಲಿ ಈ ಅಪಘಾತ ಸಂಭವಿಸಿದೆ.
ಅರುಂಧತಿ ಅವರು ಯೂಟ್ಯೂಬ್ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿ ಬೈಕ್ ನಲ್ಲಿ ತನ್ನ ಸಹೋದರನೊಂದಿಗೆ ವಾಪಾಸಾಗುತ್ತಿದ್ದರು. ಈ ವೇಳೆ ವಾಹನವೊಂದು ಢಿಕ್ಕಿ ಹೊಡೆದು ನಿಲ್ಲಿಸದೆ ಸಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಅರುಂಧತಿ ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿ ಆಗಿದೆ. ತಲೆಗೆ ಏಟಾಗಿ, ಅರ್ಧ ಗಂಟೆಯವರೆಗೂ ರಸ್ತೆಯಲ್ಲಿ ಇಬ್ಬರು ಬಿದ್ದಿದ್ದರು ಎಂದು ವರದಿ ತಿಳಿಸಿದೆ.





