ಬಿಜೆಪಿಯವರು ರಾಮ ಮಂದಿರ ವಿಚಾರ ಬಳಸಿಕೊಂಡರೆ ತಪ್ಪಿಲ್ಲ: ಉಡುಪಿಯ ಪೇಜಾವರ ಶ್ರೀ
ದಾವಣಗೆರೆ: ರಾಮ ಮಂದಿರ ವಿಚಾರ ಬಿಜೆಪಿಯವರು ಬಳಸಿಕೊಂಡರೆ ಯಾವ ತಪ್ಪಿಲ್ಲ. ಬಿಜೆಪಿಯವರು ಕೆಲಸ ಮಾಡಿದ್ದಾರೆ. ಹಾಗಾಗಿ ಹೇಳಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಿದಂತೆ ರಾಜ್ಯದಲ್ಲಿ ಹನುಮ ಪುಣ್ಯಕ್ಷೇತ್ರ ಅಭಿವೃದ್ದಿಯಾಗಬೇಕು. ಅದಕ್ಕೊಂದು ಟ್ರಸ್ಟ್ ಮಾಡಬೇಕು ಎಂದು ಒತ್ತಾಯಿಸಿದರು.





