ಅನಂತಕುಮಾರ್ ಹೆಗಡೆಯ ಅಪ್ಪ ಬಂದರೂ ಸಂವಿಧಾನ ಬದಲಾವಣೆ ಮಾಡಲು ಆಗುವುದಿಲ್ಲ: ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜುಗೌಡ
ಯಾದಗಿರಿ: ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜುಗೌಡ ಅವರು ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಅನಂತಕುಮಾರ್ ಹೆಗಡೆ ಅಲ್ಲ, ಅವರ ಅಪ್ಪ ಬಂದರೂ ಸಂವಿಧಾನ ಬದಲಾವಣೆ ಮಾಡಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಯಾದಗಿರಿ ನಗರದಲ್ಲಿ ಮಾತನಾಡಿದ ರಾಜುಗೌಡ, ಅನಂತಕುಮಾರ್ ಹೆಗಡೆ ಅಲ್ಲ ಅವರಪ್ಪ ಬಂದರೂ ಸಂವಿಧಾನ ಬದಲಾವಣೆ ಮಾಡಲು ಆಗಲ್ಲ. ಇದೆ ತರಹ 2018 ರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ನಮ್ಮ ಪಕ್ಷಕ್ಕೆ ಪೂರ್ಣ ಬಹುಮತ ಬರೋದ್ದಕ್ಕೆ ಕಲ್ಲು ಹಾಕಿದ್ದರು. ಹಿಂದುತ್ವ, ಮೋದಿ ಗಾಳಿಯಲ್ಲಿ ಸಂಸದರಾಗುತ್ತಾರೆ. ಸಂಸದರಾದ ಮೇಲೆ ನಾಲ್ಕು ವರ್ಷ ಮಾಯ ಆಗಿಬಿಡುತ್ತದ್ದಾರೆ. ಚುನಾವಣೆ ಸಂದರ್ಭದಲ್ಲಿ ಈ ರೀತಿ ಹುಚ್ಚುಚ್ಚಾಗಿ ಹೇಳಿಕೆ ನೀಡುತ್ತಾರೆ ಎಂದು ಆಕ್ರೋಶ ಹೊರಹಾಕಿದರು





