ಬಿಜೆಪಿ 2ನೇ ಪಟ್ಟಿ ರಿಲೀಸ್: ದ.ಕ.ದಲ್ಲಿ ಬ್ರಿಜೇಶ್ ಚೌಟ, ಉಡುಪಿಯಲ್ಲಿ ಕೋಟಾ ಶ್ರೀನಿವಾಸ್ ಗೆ ಟಿಕೆಟ್
ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೆ ಆಗಿದೆ. ದಕ್ಷಿಣ ಕನ್ನಡ ಕ್ಶೇತ್ರದಲ್ಲಿ ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಬಿಜೆಪಿ ಯುವ ನಾಯಕ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಮಣೆ ಹಾಕಲಾಗಿದ್ದು, ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಗೆ ಕೊಕ್ ನೀಡಲಾಗಿದೆ.
ದಕ್ಷಿಣ ಕನ್ನಡ – ಕ್ಯಾಪ್ಟನ್ ಬೃಜೇಶ್ ಚೌಟ
ಉಡುಪಿ-ಚಿಕ್ಕಮಗಳೂರು – ಕೋಟ ಶ್ರೀನಿವಾಸ ಪೂಜಾರಿ
ಮೈಸೂರು – ಯದುವೀರ್ ಒಡೆಯರ್
ಹಾವೇರಿ – ಬಸವರಾಜ ಬೊಮ್ಮಾಯಿ
ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ
ಬೆಂಗಳೂರು ಕೇಂದ್ರ- ಪಿ.ಸಿ ಮೋಹನ್
ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ
ಬೆಂಗಳೂರು ಗ್ರಾಮಾಂತರ – ಮಂಜುನಾಥ್
ಚಿಕ್ಕೋಡಿ – ಅಣ್ಣಾ ಸಾಹೇಬ್ ಜೊಲ್ಲೆ
ಬಾಗಲಕೋಟೆ – ಪಿ.ಸಿ ಗದ್ದಿಗೌಡರ
ವಿಜಯಪುರ – ರಮೇಶ್ ಜಿಗಜಿಣಿಗಿ
ಕಲಬುರಗಿ – ಉಮೇಶ ಜಾಧವ್
ಬೀದರ್ – ಭಗವಂತ ಖೂಬಾ





