ಯುವಕನ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ
ಬೆಂಗಳೂರು: ಶಿವರಾತ್ರಿ ಹಿನ್ನೆಲೆ ದೇವಸ್ಥಾನದ ಮುಂದೆ ಹಾಕಿದ್ದ ಹಾಡಿಗೆ ಕುಣಿಯುತ್ತಿದ್ದ ವೇಳೆ ಮೈ ಟಚ್ ಆಗಿದಕ್ಕೆ ಯುವಕರ ಗುಂಪಿನ ನಡುವೆ ಜಗಳ ಶುರುವಾಗಿದ್ದು ಓರ್ವ ಯುವಕನ ಕೊಲೆಯಾಗಿದೆ.
ಈ ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಚೇತನ್, ರಂಗಾ, ಪವನ್ ಬಂಧಿತ ಆರೋಪಿಗಳು. ಯೋಗೇಶ್ (23) ಎರಡು ದಿನದ ಹಿಂದೆ ಕೊಲೆಯಾದ ಯುವಕ.
ಶಿವರಾತ್ರಿಯ ಹಬ್ಬದ ರಾತ್ರಿ ಕೊಲೆಯಾದ ಯುವಕ ಯೋಗೇಶ್, ಶ್ರೀನಗರ ನಿವಾಸಿ. ಈತ ಹನುಮಂತನಗರದ ಬೈಕ್ ಸರ್ವಿಸ್ ನಲ್ಲಿ ಕೆಲಸ ಮಾಡುತಿದ್ದ. ಹಬ್ಬದ ಹಿನ್ನಲೆ ಗಿರಿನಗರದ ದೇವಸ್ಥಾನಕ್ಕೆ ತೆರಳಿದ್ದ ಈತ ಮನೋರಂಜನೆಯ ಕಾರ್ಯಕ್ರಮದಲ್ಲಿ ಯುವಕರ ಜೊತೆ ಓಡಾಡಿಕೊಂಡಿದ್ದ.
ಈ ನಡುವೆ ಬರುತಿದ್ದ ಸಾಂಗ್ ಗಳಿಗೆ ಸ್ಟೇಪ್ ಹಾಕಿ ಎಂಜಾಯ್ ಮಾಡಿದ್ದ. ಆದ್ರೆ ಈ ನಡುವೆ ಅಲ್ಲೇ ಬಂದಿದ್ದ ಮತ್ತೊಂದು ಗುಂಪಿನ ಯುವಕರಿಗೆ ಬೈ ಮೀಸ್ ಆಗಿ ಈತನ ಕಾಲು ಟೆಚ್ ಆಗಿತ್ತು. ಅಷ್ಟಕ್ಕೆ ದೇವಸ್ಥಾನದ ಬಳಿಯೇ ಜಗಳ ಶುರುವಾಗಿತ್ತು.





