December 20, 2025

ಕೋಟ: ಮಗಳ ಮದುವೆಗೆ ತಯಾರಿಯಲ್ಲಿದ್ದ ವ್ಯಕ್ತಿ ಕುವೈಟ್‌ನಲ್ಲಿ ಸಾವು

0
image_editor_output_image1312028166-1710138087809.jpg

ಕೋಟ: ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾಣ ಗ್ರಾಮದ ದಿ| ಜಿ. ಕೆ. ಹಸನಬ್ಬ ಅವರ ಪುತ್ರ ಜಲಾಲ್‌ (55) ಮಾ. 9ರಂದು ಸಂಜೆ ಕುವೈಟ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಉದ್ಯೋಗದಲ್ಲಿದ್ದ ಅವರು, ಮಗಳ ಮದುವೆಗಾಗಿ ಇನ್ನು ಹತ್ತು ದಿನದಲ್ಲಿ ಊರಿಗೆ ಬರುವ ತಯಾರಿಯಲ್ಲಿದ್ದರು. ಆದರೆ ಈ ನಡುವೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ವಿಷಯ ತಿಳಿದ ಮನೆಯವರ ರೋಧನ ಮುಗಿಲು ಮುಟ್ಟಿದೆ. ಸೋಮವಾರ ಮೃತದೇಹ ತಾಯ್ನಾಡಿಗೆ ತಲುಪಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!