ವಿಟ್ಲ: ಗೆಳೆಯರ ಬಳಗ ಬೈರಿಕಟ್ಟೆಯ 24ನೇ ವಾರ್ಷಿಕೋತ್ಸವ ಕಾರ್ಯಕ್ರಮ
ವಿಟ್ಲ: ಗೆಳೆಯರ ಬಳಗ ಬೈರಿಕಟ್ಟೆ ಇದರ 24ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ಕೇಪು ಕಲ್ಲಂಗಳ ಶಾಲಾ ಮುಖ್ಯ ಶಿಕ್ಷಕಿ ಮಾಲತಿ ಟೀಚರ್ ಮಾತನಾಡಿ ಶಾಂತಿ ಸಹಭಾಳ್ವೆ ಅಗತ್ಯವಾಗಿದೆ. ಎಲ್ಲ ಜಾತಿಯವರು ಒಟ್ಟಾಗಿ ಸೇರಿ ಕಾರ್ಯ ನಡೆಸಿದಾಗ ಯಶಸ್ವಿಯಾಗುತ್ತದೆ. ಇಂತಹ ಕಾರ್ಯಕ್ರಮಗಳ ಮೂಲಕ ಸೌಹಾರ್ದತೆ ಶಾಶ್ವತವಾಗಿ ನೆಲೆಯೂರುತ್ತದೆ ಎಂದರು.
ದೇಲಂತಬೆಟ್ಟು ಚರ್ಚ್ ಧರ್ಮಗುರು ಸುನೀಲ್ ಪ್ರವೀಣ್ ಪಿಂಟೋ ಮಾತನಾಡಿ
ಸೌಹಾರ್ದತೆ ಕೇವಲ ವೇದಿಕೆಗೆ ಸೀಮಿತವಾಗಬಾರದು, ಕಾರ್ಯರೂಪದಲ್ಲಿ ಕಾಣಬೇಕು. ಎಲ್ಲರೂ ಒಟ್ಟಾಗಿ ಕೆಲಸ ಮಾಡುವಾಗ ಭಾರತೀಯತೆ ಕಾಣುತ್ತದೆ. ಧರ್ಮದಲ್ಲಿ ಹೇಳುವ ಒಳ್ಳೆಯ ವಿಚಾರವನ್ನು ಮೈಗೂಡಿಸಿಕೊಂಡು ಜೀವನ ನಡೆಸಬೇಕು. ಇಂತಹ ಕಾರ್ಯಕ್ರಮಗಳ ಮೂಲಕ ಭಾವೈಕ್ಯತೆ ಉಂಟಾಗುತ್ತದೆ ಎಂದರು.
ಗೆಳೆಯರ ಬಳಗದ ಗೌರವಾಧ್ಯಕ್ಷ ಡಿ. ನಾರಾಯಣ ರಾವ್ ಅಧ್ಯಕ್ಷತೆ ವಹಿಸಿದ್ದರು.
ಅಳಿಕೆ ಗ್ರಾ.ಪಂ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಕನ್ಯಾನ ಗ್ರಾ.ಪಂ ಉಪಾಧ್ಯಕ್ಷ ಕೆ.ಪಿ ಅಬ್ದುಲ್ ರಹಿಮಾನ್, ಅಳಿಕೆ ಗ್ರಾ.ಪಂ ಸದಸ್ಯರಾದ ಸದಾಶಿವ ಶೆಟ್ಟಿ ಮಡಿಯಾಳ, ರವೀಶ್ ಕೆ, ಬಬಿತ, ಉದ್ಯಮಿ ಅಬ್ದುಲ್ ಕುಂಞ ಹಾಜಿ, ಜಲಾಲೀಯ ಜುಮ್ಮಾ ಮಸೀದಿ ಗೌರವಾಧ್ಯಕ್ಷ ಬಿ.ಕೆ ಅಬೂಬಕ್ಕರ್, ಸಂಘಟನಾ ಕಾರ್ಯದರ್ಶಿ ಪಿ.ಬಿ ಮೊಹಿದ್ದೀನ್ , ದೇಲಂತಬೆಟ್ಟು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಬಿ.ಕೆ ಇಬ್ರಾಹಿಂ, ಉಪಸ್ಥಿತರಿದ್ದರು.
ಗೆಳೆಯರ ಬಳಗದ ಅಧ್ಯಕ್ಷ
ಚಂದ್ರಶೇಖರ್ ಮಾಸ್ತರ್ ಸ್ವಾಗತಿಸಿದರು. ಗೆಳೆಯರ ಬಳಗದ ಸಂಘಟನಾ ಕಾರ್ಯದರ್ಶಿ ಪಿ.ಬಿ ಮೊಹಿದ್ದೀನ್ ಪ್ರಸ್ತಾವನೆಗೈದರು. ಅನ್ವರ್ ಮುಸ್ತಫಾ ಹೊಸಮನೆ ವಂದಿಸಿದರು. ಪ್ರವೀಣ್ ಶೆಟ್ಟಿ ನಿರೂಪಿಸಿದರು.





