February 3, 2026

ಮಂಗಳೂರು: 4 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಗೆ ನ್ಯಾಯಾಂಗ ಬಂಧನ

0
image_editor_output_image2127875127-1709637534466.jpg

ಮಂಗಳೂರು: ಸುಮಾರು 4 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕೇರಳದ ಕಾಸರಗೋಡುನ ಪಲ್ಲಂ ಹೌಸ್ ಪೈವಳಿಕೆ ಗ್ರಾಮ ನಿವಾಸಿ ಬಂಧಿತ ಆರೋಪಿ ಅಬ್ದುಲ್ ಸಲಾಂ( 26) ಎಂದು ಗುರುತಿಸಲಾಗಿದೆ.

ಕೊಣಾಜೆ ಠಾಣೆಯಲ್ಲಿ ಠಾಣಾ ಅಕ್ರ 39/2018 ಕಲಂ: 379, 392, 397, 411, 414 ಐಪಿಸಿ ಮತ್ತು ಕೊಣಾಜೆ ಪೊಲೀಸ್ ಠಾಣಾ ಅಕ್ರ: 68/2018 ಕಲಂ: 379 ಮತ್ತು 4, 5, 7, 8, 9, 11,12 ಗೋ ಹತ್ಯೆ ನಿಷೇದ ಕಾಯ್ದೆಯಂತೆ ಪ್ರಕರಣಗಳು ದಾಖಲಾಗಿದ್ದು, ಈತನು ಸುಮಾರು 4 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ.

ಫೆ 03 ರಂದು ಉಳ್ಳಾಲ ತಾಲೂಕು ನಾಟೆಕಲ್ ಎಂಬಲ್ಲಿ ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್(ಐ.ಪಿ.ಎಸ್) ರವರ ನಿರ್ದೇಶನದಂತೆ, ಮಂಗಳೂರು ನಗರದ ಉಪ ಪೊಲೀಸ್ ಆಯುಕ್ತರದ ಸಿದ್ದಾರ್ಥ ಗೋಯಲ್, ದಿನೇಶ್ ಕುಮಾರ್ ರವರ ಮಾರ್ಗದರ್ಶನ ಹಾಗೂ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ ಎನ್ ನಾಯಕ ಮತ್ತು ಕೊಣಾಜೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರವೀಂದ್ರ ಸಿ ಮುಂದಾಳತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ನಾಗರಾಜ್ ಎಸ್, ಪುನೀತ್ ಗಾಂವಕಾರ್ ಸಿಬ್ಬಂದಿಗಳಾದ ಹೆಚ್.ಸಿ 323 ಮಹಮ್ಮದ್ ಶರೀಫ್, ಪಿಸಿ 765 ಸಂತೋಷ, ಪಿಸಿ 3204 ಸುರೇಶ, ಪಿಸಿ 2439 ಬಸವನಗೌಡ ರವರ ತಂಡ ಕಾರ್ಯಚರಣೆ ನಡೆಸಿ ಆರೋಪಿ ಅಬ್ದುಲ್ ಸಲಾಂನನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಯಿತು.

ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!