ರಾಜಕೀಯಕ್ಕೆ ಬಲಿಪಶುವಾದ ಎಂ.ಎಸ್. ಮಹಮ್ಮದ್ ಎಂಬ ದುರಂತ ನಾಯಕ
ನೊಂದ ಕಾಂಗ್ರೆಸ್ ಕಾರ್ಯಕರ್ತನ ಬರಹ ( ಸಂಗ್ರಹ ಮೂಲ: WhatsApp)
ಇತ್ತೀಚಿನ ವಿದ್ಯಮಾನಗಳನ್ನು ಗಮನಿಸುವಾಗ, M S ಮಹಮ್ಮದ್ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುತ್ತಿದ್ದರೆ ಹೇಗಿರುತ್ತಿತ್ತು?? M S ಗಾಂಭೀರ್ಯತೆ!!!
ಎಂಬ ಪ್ರಶ್ನೆಗಳನ್ನು ಮನಸ್ಸಿಗೆ ಹಾಕಿ ಆಲೋಚಿಸಿದೆ…
ಅದೂ ಬೇಡ, ಒಂದು ಎಂ.ಎಲ್.ಎ. ಯಾಗಿ ಎಂ.ಎಸ್ ಮಹಮ್ಮದ್ ವಿಧಾನಸೌಧ ಪ್ರವೇಶಿಸಿದರೆ, ಅದರ ಗತ್ತು, ಗಾಂಭೀರ್ಯ ಹೇಗಿರುತ್ತಿತ್ತು??ಎಂಬ ಪ್ರಶ್ನೆ ಮೂಡತೊಡಗಿದವು..
ಅದೂ ಬೇಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ, ಎಂ.ಎಸ್. ಆಯ್ಕೆಯಾಗಿರುತ್ತಿದ್ದರೆ, ಹೇಗಿರುತ್ತಿತ್ತು??ಎಂ.ಎಸ್. ಆಡಳಿತ ವೈಖರಿ …
ಅದೂ ಬೇಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುತ್ತಿದ್ದರೆ, ಹೇಗಿರುತ್ತಿತ್ತು??
ಪಕ್ಷದ ವೈಭವ….ಅದೂ ಬೇಡ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ , ಅಧ್ಯಕ್ಷರಾಗಿರುತ್ತಿದ್ದರೆ, ಹೇಗಿರುತ್ತಿತ್ತು??ಆ ಇಲಾಖೆಯ ಕಾರ್ಯವೈಖರಿ!!!!
ಆದರೆ ಇದೆಲ್ಲ ಕವಿ ಕಂಡ ಕನಸುಗಳು ಮಾತ್ರ ಎಂದು ಹೇಳಬಹುದು…
ಹೆಸರು: ಎಂ.ಎಸ್ ಮಹಮ್ಮದ್
ಊರು: ಪುಣಚ
ವಿದ್ಯಾಭ್ಯಾಸ: ಬಿ.ಎ. ಪದವಿ
ಇವರನ್ನು ಪರಿಚಯವಿಲ್ಲದ, ಒಬ್ಬನೇ ಒಬ್ಬ ವ್ಯಕ್ತಿ ದ. ಕ ಜಿಲ್ಲೆಯಲ್ಲಿರಲು ಸಾಧ್ಯವಿಲ್ಲ. 3 ಬಾರಿ ಜಿಲ್ಲಾ ಪಂಚಾಯತ್ ಸದಸ್ಯನಾಗಿ, ಒಂದು ಬಾರಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷನಾಗಿ, ಕಾರ್ಯನಿರ್ವಹಿಸಿದ್ದಾರೆ.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿದ್ದ, ಕಾಲಾವಧಿ ಇಡೀ ಜಿಲ್ಲೆಯಲ್ಲಿ, ಎಂ.ಎಸ್. ಎಂಬ ಎರಡಕ್ಷರ, ಜನಮಾನಸದಲ್ಲಿ ನೆಲೆಯೂರುವಂತೆ ಮಾಡಿದ ಸಮಯ..
ಜಿಲ್ಲೆಯಲ್ಲಿ ಅಧ್ಯಕ್ಷರಿದ್ದರೂ, ಅಧ್ಯಕ್ಷರಿಗಿಂತ ಹೆಚ್ಚಾಗಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರ ಹೆಸರು ಹೆಚ್ಚು ಪ್ರಸಿದ್ಧಿ ಪಡೆಯಿತು.
ಅಂದಿನ ಆ ಕಾಲದಲ್ಲಿ ಹಲವಾರು ಘಟನೆ ನಡೆದ ಸ್ಥಳಗಳಿಗೆ ಎಂಎಸ್ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ, ಕೇವಲ ,ಎಂ ಎಸ್ ರ ನಡೆ, ಮಾತು, ಅವರ ಗ್ರಾಂಡ್ ಎಂಟ್ರಿಯನ್ನು, ನೋಡಲೆಂದು ಜನರು ಅಲ್ಲಲ್ಲಿ ನೆರೆಯುತ್ತಿದ್ದರು…
*ಕೇವಲ 20 ತಿಂಗಳು ಜಿಲ್ಲಾ*
ಪಂಚಾಯತ್ ಉಪಾಧ್ಯಕ್ಷರಾಗಿದ್ದ ಎಂ ಎಸ್ ರ ಕಾಲಾವಧಿ, ಇಡೀ ಜಿಲ್ಲೆ ಎಂ ಎಸ್ ಮಾಯವಾಗಿತ್ತು. ಪತ್ರಿಕೆ, ರೇಡಿಯೋ, ದೂರದರ್ಶನ, ವಿಡಿಯೋ ಗ್ರಾಫರ್ ನ ಕ್ಯಾಮರಾ, ಬ್ಯಾನರ್, ಕಟೌಟ್ ಗಳಲ್ಲಿ, M S ಭಾವಚಿತ್ರಗಳು, ಹಾರಾಡಿ ವಿಜ್ರಂಭಿಸಿದ ದಿನಗಳು, ಓರ್ವ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷನಿಗೆ, ಇಷ್ಟೊಂದು ಸಾಮರ್ಥ್ಯ ಇದೆ, ಎಂದು ಜಿಲ್ಲೆಗೆ ತೋರಿಸಿದ್ದು ಎಂ.ಎಸ್…
ಈ 20 ತಿಂಗಳು M S ರಾಜಕೀಯ ಜೀವನದಲ್ಲಿ, ಮರೆಯಲಾಗದ ದಿನಗಳಾಗಿರಬಹುದು.
*ಕುತ್ತಿಗೆಯ ಮುಂದೆ ಉರುಳೇ ಬರಲಿ, ಭುಜಕ್ಕೆ ನೇರ ತಲವಾರ್ ದಾಳಿ ಆಗಲಿ, ಕಾಂಗ್ರೆಸ್ ತತ್ವ ತಪ್ಪದ M S*
M S ನಂತಹ ಪಕ್ಷದ ಶಿಸ್ತಿನ ಸಿಪಾಯಿಯನ್ನು ತಕ್ಕಮಟ್ಟಿಗೆ ಜಿಲ್ಲೆಯಲ್ಲಿ ಹುಡುಕುವುದು ಕಷ್ಟ….
ನೀವೆಲ್ಲ, ಎಂಎಸ್ ಅನ್ನು ನೋಡುತ್ತಿರುವುದು, ಎಷ್ಟು ಸಮಯವಾಯಿತು, ಎಂದು ನನಗೆ ಗೊತ್ತಿಲ್ಲ!!ಆದರೆ ನಾನು ನೋಡಿದ ಸುಧೀರ್ಘ ವರ್ಷದಲ್ಲಿ ಅವರು ಒಂದೇ ಒಂದು ದಿನ, ಬಿಳಿ ಬಣ್ಣ ಬಿಟ್ಟು, ಬೇರೆ ಬಣ್ಣದ ವಸ್ತ್ರ,ಧರಿಸಿಕೊಂಡು ಕಾಣಿಸಲಿಲ್ಲ… ಪಕ್ಷವನ್ನು ಯಾರೇ ಟೀಕಿಸಿದರೂ, ಪಕ್ಷವನ್ನು ಬಿಟ್ಟುಕೊಟ್ಟ, ಉದಾಹರಣೆ ಗಳೇಇಲ್ಲ…
*ಮೈಕದ ಚಳಿ ಬಿಡಿಸಿದ ಎಂ.ಎಸ್.*
ಹಲವು ವರ್ಷಗಳ ಹಿಂದೆ ಬಿ.ಸಿ. ರೋಡಿನಲ್ಲಿ, ಸರಕಾರಿ ಕಾರ್ಯಕ್ರಮ ನಡೆದಿದ್ದು, ಸರ್ಕಾರಿ ಅಧಿಕಾರಿಗಳು ಸೇರಿ ಹಲವು ಮಂದಿ ಮಾತನಾಡಬೇಕಿದ್ದರು.. ಪ್ರಾರ್ಥನೆ, ದೀಪ ಬೆಳಗಿಸಿಯಾದ, ಬಳಿಕ, 3 ಮಂದಿ ಮಾತನಾಡಿದರು. ಅವರು ಮಾತನಾಡಿದ್ದು ಸರಿಯಾಗಿ ಕೇಳಿಸುತ್ತಿರಲಿಲ್ಲ,,ಕಾರ್ಯಕ್ರಮ ಆಯೋಜಕರು ಮೈಕ್ ಆಪರೇಟರ್ ಬಳಿ ಬಂದು ಸೌಂಡ್ ಸರಿ ಇಲ್ವಾ ?ಕೇಳಿಸ್ತಾ ಇಲ್ಲ!!ಎಂದು ಮೈಕ್ಸೆಟ್ ಅನ್ನು ದೂರಿದರು.. ಮೈಕ್ ಆಪರೇಟರ್ ಏನು ಮಾಡಬೇಕೆಂದು ತಿಳಿಯಲಿಲ್ಲ!!!4ನೆಯದಾಗಿ ಮಾತನಾಡಿದವರು ಕೂಡ ಹಾಗೆ ಮಂತ್ರಿಸಿದಂತೆ ಮಾತನಾಡಿದರು. 5ನೇದಾಗಿ ಭಾಷಣ ಮಾಡಿದ್ದು ಎಂ.ಎಸ್ …
ಮೈಕಕ್ಕೆ ಹಿಡಿದ ಚಳಿ ಬಿಟ್ಟಂತಾಯಿತು. ಎಲ್ಲರೂ ವೇದಿಕೆ ಕಡೆಗೆ ನೋಡಿದರು. ಸಭಾ ಕಂಪನವಾಯಿತು.. ಮೈಕ್ ಆಪರೇಟರ್ ನ ಮುಖದಲ್ಲಿ ನಗು ಮೂಡಿತು…
ಮಾತಿನಲ್ಲಿ ಎಮ್.ಎಸ್. ಅನ್ನು ಸೋಲಿಸುವುದು ಕಷ್ಟ: ಅಕ್ಷರದ ಸ್ಪಷ್ಟತೆ, ಉಚ್ಚಾರ ದೋಷವಿಲ್ಲದೆ, ಮಾತನಾಡುವ ಶೈಲಿ, ಅಘಾದ ಪಾಂಡಿತ್ಯ, ಅದಕ್ಕೆ ತಕ್ಕದಾದ ತನ್ನ ಡ್ರೆಸ್ ಕೋಡ್…
ಎಂ.ಎಸ್. ನವರ ಬಳಿ ಮಾತನಾಡುವಾಗ ಜನರು, 2-3 ಬಾರಿ ಆಲೋಚನೆ ಮಾಡುತ್ತಾರೆ. ಕಾರಣ ಒಂದನೆಯದು, ಅವರ ಸ್ವರ ದೊಡ್ಡದು, ಎರಡನೆಯದಾಗಿ ತಪ್ಪಿದರೆ ಅದನ್ನು ಮುಲಾಜಿ ಇಲ್ಲದೆ, ಹೇಳುತ್ತಾರೆ!!ಎಂಬ ಕಾರಣಕ್ಕೆ ಅವರನ್ನು ಮಾತನಾಡಿಸುವಾಗ ಆಲೋಚಿಸಿ ಮಾತನಾಡುತ್ತಾರೆ…
ಅಧಿಕಾರಿ ಬೆವರಿದ ಘಟನೆ:ಕಳೆದ ಐದು ವರ್ಷಗಳ ಹಿಂದೆ ಮಂಗಳೂರಿನ ಸರಕಾರಿ ಕಛೇರಿ ವೊಂದರಲ್ಲಿ, ಒಂದು ಫೈಲ್ ಕೊಟ್ಟು ಆರು ತಿಂಗಳಿಗೂ ಅಧಿಕ ಸಮಯವಾಗಿತ್ತು …ನಾಳೆ ಬನ್ನಿ ಒಂದು ವಾರ ಬಿಟ್ಟು ಬನ್ನಿ, ಹೀಗೆ ದಿನ ಮುಂದಕ್ಕೆ ಹೋಗುತ್ತಿತ್ತು …
ಒಂದು ದಿನ ಮಂಗಳೂರಿನಲ್ಲಿ ಏನು ಮಾಡುವುದೆಂದು ಆಲೋಚಿಸುವಾಗ ಎಂ.ಎಸ್. ರವರ ಕಾರ್, ಕಣ್ಣೆದುರಲ್ಲಿ ಹೋದಂತಾಯಿತು ….
ನನ್ನಲ್ಲಿ ಅವರ ನಂಬರ್ ಇರಲಿಲ್ಲ ಅವರಿಗೆ ನನ್ನ ಪರಿಚಯವೂ ಇರಲಿಲ್ಲ …..
ತಕ್ಷಣ ಸ್ನೇಹಿತನ ಸಹಾಯದಿಂದ ಅವರ ಮೊಬೈಲ್ ನಂಬರ್ ಸಸಂಗ್ರಹಿಸಿ,ಕರೆ ಮಾಡಿದೆ…..
ಡಿ ಸಿ ಆಫೀಸ್ ನಲ್ಲಿ ಇರುವುದು ತಿಳಿಯಿತು. ಓಡಿ ಹೋಗಿ ವಿಷಯ ತಿಳಿಸಿದೆ. ನನಗೆ ಸ್ವಲ್ಪ ಕೆಲಸ ಉಂಟು. ಆದ್ಮೇಲೆ ಹೋಗೋಣ ಎಂದರು, 20 ನಿಮಿಷದಲ್ಲಿ ಬಂದರು. ನನ್ನನ್ನು ಕಾರಲ್ಲಿ ಕುಳಿತುಕೊಳ್ಳುವಂತೆ ಹೇಳಿದರು……
ಕಾರ್ ಕಚೇರಿಯ ಮುಂಭಾಗದಲ್ಲಿ ಹೋಗಿ ನಿಂತಿತು..ನಾನು ಮೆಲ್ಲ ಇಳಿದೆ, ನನ್ನ ಹಿಂಬಾಲಿಸಿ ಎಂಎಸ್ ರವರು ಬಂದರೂ, ಅವರನ್ನು ಕಂಡ ಕೂಡಲೇ ಅಧಿಕಾರಿಗಳು ಎದ್ದುನಿಂತು ನಮಸ್ಕಾರ ಸೂಚಿಸಿದರು…..
ಇವರ ಒಂದು ಫೈಲ್ ಕೊಟ್ಟಿದ್ದರಲ್ವ???ಏನಾಯ್ತು ಎಂದು ಕೇಳಿದರು??ಎಂ.ಎಸ್. ನ ದೆಸೆಯೋ??ನನ್ನ ಅದೃಷ್ಟವೋ???ಗೊತ್ತಿಲ್ಲ!!! ಆಗಲೇಫೈಲ್ ನನ್ನ ಕೈ ಸೇರಿತ್ತು..
*ನೀವು ಗಮನಿಸಿದ್ದಾರಾ*
ನೀವು ಗಮನಿಸಿರಬಹುದು ಬಿಜೆಪಿಯಿಂದ ಆಯ್ಕೆಯಾಗುವ ಪ್ರತಿಯೊಬ್ಬ,ಜನಪ್ರತಿನಿಧಿಯ ಶರೀರ ಗಟ್ಟಿ ಇಲ್ಲದೆ ಇರಬಹುದು, ಆದರೆಅವರ ಮಾತು ಗಟ್ಟಿ ಇರುತ್ತದೆ…..
ಕಾಂಗ್ರೆಸ್ ನಲ್ಲಿ ಬಿಜೆಪಿಯನ್ನು ಕಟ್ಟಿ ಹಾಕುವಂತ ನಾಯಕರಿದ್ದಾರೆ.. ಆ ನಾಯಕರು ಮಂಗಳೂರು ಮಂಗಳೂರಿನ ಸುರತ್ಕಲ್, ನ ಒಳಗೆ ಸಂಪಾಜೆಯಿಂದ ಕೆಳಗೆ ಈಚೆ ಸಕಲೇಶಪುರ ಗಿಂತ ಕೆಳಗೆ ಇದರ ಒಳಗೆ ಮಾತ್ರ ಭಾಷಣ ಮಾಡಬೇಕು….!!!
*ಟಿವಿ ಡಿಬೇಟ್ ಗಳಲ್ಲಿ ಪರದಾಡುತ್ತಿರುವ ಕಾಂಗ್ರೆಸ್*
ರಾಜ್ಯದ ಬಹುತೇಕ ಮಾಧ್ಯಮಗಳು ಬಿಜೆಪಿ ಪರ ಕೆಲಸ ಮಾಡುತ್ತಿದೆ…..
ಎಲ್ಲರಿಗೂ ಗೊತ್ತಿರುವ ಸಂಗತಿ….
ಸುಧೀರ್ಘ ರಾಜಕೀಯ ಮಾಡಿದ ಅತಿ ದೊಡ್ಡ ಪಕ್ಷಕ್ಕೆ, ಕನಿಷ್ಠ,ಮೂರು ಮಾಧ್ಯಮಗಳನ್ನು, ತನ್ನ ಹಿಡಿತದಲ್ಲಿ ಇಡಲು ಸಾಧ್ಯವಾಗಿಲ್ಲ,!!!!!
ಹೀಗಿರುವಾಗ ಒಳ್ಳೆ ಮಾತನಾಡಲು ಸಾಧ್ಯವಿರುವ ಎಂ.ಎಸ್. ನಂತಹ ನಾಯಕರನ್ನು ಟಿವಿ ಡಿಬೇಟ್ ಗೆ ಕಳುಹಿಸಿರುತ್ತಿದ್ದರೆ, ಪಕ್ಷದ ಕೊಡುಗೆ ಸ್ವಲ್ಪವಾದರೂ ತಿಳಿಯಬಹುದು……
ಆದರೆ
ಒಳ್ಳೆಯ ಮಾತನಾಡುವ ವ್ಯಕ್ತಿಗಳನ್ನು ಮೂಲೆಗೆ ತಳ್ಳಿ, ಬಾಯಿಗೆ ಅಪ್ಪ ಹಾಕಿ ಚಡಪಡಿಸುವವರನ್ನು, ಚಾನಲ್ಗಳಿಗೆ ಕಾಂಗ್ರೆಸ್ ಕಳುಹಿಸುತ್ತದೆ ……
ಇದನ್ನು ನೋಡುವ ಕಾಂಗ್ರೆಸ್ ಕಾರ್ಯಕರ್ತನಿಗೆ ಆಗುವ ಸಂಕಟ ಅಷ್ಟಿಷ್ಟಲ್ಲ….
*ಕಾಂಗ್ರೆಸ್ ಕಾರ್ಯಕರ್ತರ ಜೀವಾಳ ಎಂ.ಎಸ್.*
ಈ ಜಿಲ್ಲೆಯ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ, ಸಮಸ್ಯೆ ಆದಾಗ ಪ್ರಥಮ ಕಾಲ್ ಮಾಡಿ ಸಮಸ್ಯೆ ಹೇಳುವುದು ಎಂ ಎಸ್ ನವರಲ್ಲಿ ಆಗಿರುತ್ತದೆ……
ಕಾರ್ಯಕರ್ತರಿಗೆ ಎಂ.ಎಸ್. ಅಂದರೆ ಜೀವಾಳ…
*ದಕ್ಷಿಣ ಕನ್ನಡ ಜಿಲ್ಲೆಯ ಟ್ರಬಲ್ ಶೂಟರ್ ಎಂ.ಎಸ್.*
ಸಮಸ್ಯೆಗಳು ಹೇಗೆ ಬಗೆಹರಿಸಬೇಕು??
ಎಲ್ಲಿ ಹೇಗೆ ಮಾತನಾಡಬೇಕು?!
ಎಲ್ಲವೂ ಎಂ ಎಸ್ ಗೆ ಚೆನ್ನಾಗಿ ಗೊತ್ತಿರುವ ಕಾರಣ ಎಲ್ಲಿ,ಭಿನ್ನಮತ ಎದುರು ಆಗುತ್ತದೋ ಅಲ್ಲಿನ ಬಹುತೇಕ ಕಡೆಗಳಿಗೆ, ಪಕ್ಷ ಕಳುಹಿಸಿ ಕೊಡುವ ವ್ಯಕ್ತಿಯ ಹೆಸರು ಎಂ.ಎಸ್…..
*ಎಂ.ಎಸ್. ದಿನಚರಿ*
ದಿನ ಬೆಳಿಗ್ಗೆಯಾದರೆ 5 – 6 ಪತ್ರಿಕೆಗಳು ಮನೆಗೆ ತಲುಪುತ್ತದೆ..ಎಲ್ಲಾ ಪತ್ರಿಕೆಗಳನ್ನು ಓದಿ ಮನೆಯಲ್ಲಿ ಸೇರುವ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಿ, 8:30 ಸುಮಾರಿಗೆ ಸ್ಟಾರ್ಟ್ ಆಗುವ ಇನ್ನೋವಾ 🚘 ಮನೆಗೆ ಸೇರುವಾಗ ರಾತ್ರಿ 2:00 ಗಂಟೆ…..😭
ನಿರಂತರ ಜನ ಜನ ಜನ, ನಾನಿರುವುದೇ ಜನರಿಗಾಗಿ, ಎಂದು ಬದುಕಿತೊರಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಲೀಡರ್ ಎಂ.ಎಸ್.
*ಜಿಲ್ಲೆಯಾದ್ಯಂತ ಅಭಿಮಾನಿ ವರ್ಗ*
ಇರುವ ಸಂಪತ್ತನ್ನು ಸಮಾಜಕ್ಕೆ ಚೆಲ್ಲಿ ಬದುಕಿದ ದುರಂತ ನಾಯಕ ….
ಎಂ.ಎಸ್. ಎಂದೊಡನೆ ಹೌಹಾರುವ ಅಭಿಮಾನಿಗಳು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇದ್ದಾರೆ…
ಈ ಒಂದು ಅಭಿಮಾನಿ ವರ್ಗ ಬಿಟ್ಟರೆ, ರಾಜಕೀಯದಲ್ಲಿ ಎಂಎಸ್ ಸಾಧಿಸಿದ ಸಂಪತ್ತು ಬರಿ, ಶೂನ್ಯವಾಗಿದೆ……
ತನ್ನ ಕೈಯಿಂದ ದಿನಕ್ಕೆ, ಐದು- ಆರು ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ರಾಜಕೀಯ ಮಾಡಿದ ರಾಜಕಾರಣಿ…
*ಎಂ ಎಸ್ ಕಾಣಿಸದ ಪಾದಯಾತ್ರೆ ಇಲ್ಲ*
ಈ ಬಾರಿ ಕಾಂಗ್ರೆಸ್ ಪ್ರಜಾಧಾನಿಯಾತ್ರೆಯನ್ನು ರಾಜ್ಯದ್ಯಂತ ಹಮ್ಮಿಕೊಂಡಿತ್ತು…
ಈ ಎಲ್ಲಾ ಪಾದಯಾತ್ರೆಗಳಲ್ಲಿ ವಿಡಿಯೋವನ್ನು ಪರಿಶೀಲಿಸಿದರೆ, ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಪಾದಯಾತ್ರೆಗಳಲ್ಲಿ ಈ ದೊಡ್ಡ ಜೀವ ಮಾರ್ಗದ ಉದ್ದಕ್ಕೂ ನಡೆಯುವುದು ಕಾಣಿಸಬಹುದು..,
*ಎಂ.ಎಸ್. ಜಿಲ್ಲೆ ಬಿಟ್ಟು ರಾಜ್ಯ ಏರಲೇ ಇಲ್ಲ*
ಎಂ.ಎಸ್. ನಂತಹ ರಾಜಕಾರಣಿಗಳನ್ನು ಕಾಂಗ್ರೆಸ್ ಗುರುತಿಸಬೇಕಿತ್ತು…..
ಎಂ.ಎಲ್.ಎ., ಎಂ.ಪಿ., ವಿಧಾನ ಪರಿಷತ್ ಸದಸ್ಯ, ರಾಜ್ಯಸಭಾ ಮೆಂಬರ್ ಎಲ್ಲದಕ್ಕೂ ಅರ್ಹತೆ ಇದ್ದರೂ, ಅವರನ್ನು ಮೇಲೆ ಹೋಗದಂತೆ ಕಾಣದ ಕೈಗಳು ಸಕ್ರಿಯವಾಗಿ ಕೆಲಸ ಮಾಡಿದೆ….
ಕಡಿಮೆ ಪಕ್ಷ ಅವರನ್ನು ಯಾವುದಾದರೂ ನಿಗಮಗಳಲ್ಲೂ ಇನ್ನಾದು ಉನ್ನತ ಹುದ್ದೆಗೆ ನೇಮಕ ಮಾಡಬಹುದಿತ್ತು…..
ಆದರೆ ಅವುಗಳ ಬಹುತೇಕ ಆಯ್ಕೆಗಳು ಪೂರ್ಣಗೊಂಡಿರುತ್ತದೆ….
ಕಾಂಗ್ರೆಸ್, ಕಾಂಗ್ರೆಸ್, ಎಂದು ದಿನ ಬೆಳಗಾಗುವುದರ ಒಳಗೆ, ಫೀಲ್ಡಿಗಿಳಿಯುವ, ಮತ್ತೊಬ್ಬ ಲೀಡರ್, ಸದ್ಯ ಇರುವುದು ಅಪರೂಪ..
ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸುವಾಗ ಪಕ್ಷಕ್ಕಾಗಿ ಹಗಲು ರಾತ್ರಿ ದುಡಿದ ಹಿರಿಯ ವ್ಯಕ್ತಿಗೆ ಕಾಂಗ್ರೆಸ್ ಅಂತಿಮವಾಗಿ ಚೊಂಬು ನೀಡಿ ಗೌರವಿಸಿದಂತೆ ಆಗಿದೆ..
*ಸಿಡಿಯಲಿದೆ ಅಭಿಮಾನಿ ವರ್ಗ*
ಸಮಾಜಕ್ಕಾಗಿ ಸದಾ ಧ್ವನಿ ಎತ್ತುವ, ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ನಡೆದ, ಎಂಎಸ್ ರವರನ್ನು ನಡೆಸಿಕೊಂಡ ಕಾಂಗ್ರೆಸ್ ಈ ಧಮನ ನೀತಿ ವಿರುದ್ಧ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ಆಕ್ರೋಶ ವ್ಯಕ್ತವಾಗುತ್ತಿದೆ…….
ಅಭಿಮಾನಿಗಳು ತಾಳ್ಮೆ, ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ…
*ಸ್ಥಾನಮಾನ ಸಿಗಲಿ ಬಿಡಲಿ ಎಂ ಎಸ್ ಗೆ ಸರಿಸಾಟಿ ಎಮ್ ಎಸ್ ಮಾತ್ರ*
ಯಾರು ಏನೇ ಹೇಳಲಿ ಏನೇ ಭಾವಿಸಲಿ ಎಂಎಸ್ ಗೆ ಇರುವ ಪರ್ಸನಾಲಿಟಿಯನ್ನು ಮತ್ತೊಬ್ಬರು ಆಕ್ರಮಿಸಲು ಸಾಧ್ಯವಿಲ್ಲ..
*ಧೈರ್ಯವಂತ ಎಂ.ಎಸ್.*
ಕಾಂಗ್ರೆಸ್ ನ ಕೆಲ ನಾಯಕರಿಗೆ ಒಂದು ಸ್ಟೇಟ್ಮೆಂಟ್ ನೀಡಲಿಕ್ಕೂ ಹೆದರುವ ಪುಕ್ಕಲು ನಾಯಕರಿರುವವರ ಮುಂದೆ ಎಂಯಸ್ ಧೈರ್ಯ ಮೆಚ್ಚಲೇಬೇಕು…
*MS ಅಧಿಕಾರಿಯಾಗಿರತ್ತಿದ್ದರೆ*????
ಅಂದಿನ ಆ ಕಾಲದಲ್ಲಿ ತಾನು ಪಡೆದ ಪದವಿಗೆ ಅನುಗುಣವಾಗಿ ಯಾವುದಾದರು ಸರಕಾರಿ ಹುದ್ದೆಗೆ, ಸೇರಿ, ಅಧಿಕಾರಿಯಾಗಬಹುದಿತ್ತು.
ಕೈತುಂಬ ಸಂಬಳ, ಆರಾಮದಿಂದ ಜೀವನ ನಡೆಸಬಹುದಿತ್ತು…..
*ಪ್ರಾಮಾಣಿಕ ಜೀವನ MS ಗೆ ಮುಳ್ಳಾಯಿತೆ??*
ರಾಜಕೀಯದಿಂದ, ಕೊಳ್ಳೆ ಹೊಡೆದು ಕೋಟಿ ಕೋಟಿ ಲೂಟುವ, ಪುಡಾರಿಗಳು ತುಂಬಿದ ರಾಜಕೀಯದಲ್ಲಿ, M S ನಂತಹ
ಸೂಕ್ತ ಸ್ಥಾನಮಾನ ದೊರೆಯುವುದು ಕಷ್ಟವೆಂದೇ, ಭಾವಿಸಬಹುದು. ಪ್ರಾಮಾಣಿಕತೆ, ಸಮಾಧಿಯಾದ ರಾಜಕೀಯವಿದು…!!!!
*ಅಜಾತಶತ್ರು M S*
ಸುಧೀರ್ಘ ರಾಜಕೀಯ ಜೀವನದಲ್ಲಿ, ಎಲ್ಲಾ ಧರ್ಮಿಯರ ಜೊತೆಗೆ, ಪ್ರೀತಿಯಿಂದ ನಡೆದುಕೊಂಡು ಬಂದ ನಾಯಕ.
ತನ್ನ ಪಕ್ಷಕ್ಕಾಗಿ,ಮಾತನಾಡುವಾಗ ಕೆಲವೊಮ್ಮೆ ಇತರ ಪಕ್ಷಗಳನ್ನು ಟೀಕಿಸಿರಬಹುದು. ಆದರೆ ಎಂ ಎಸ್ ನ ಮನಸ್ಸಿನ ಅಂತರಾಳವನ್ನು, ಇತರ ಪಕ್ಷದವರು ಕೂಡ ಓದಿ ಹೇಳಬಲ್ಲರು…
*ನಾಯಕರಿಲ್ಲದೆ ವಿಲವಿಲ ಗೊಳ್ಳುತ್ತಿರುವ ಮುಸ್ಲಿಂ ಸಮಾಜ*
ಮುಸ್ಲಿಂ ಸಮಾಜದ ನಾಯಕರೆನಿಸಿಕೊಳ್ಳುತ್ತಿರುವ ಬಹುತೇಕ ಮಂದಿ, ಸ್ವಾರ್ಥಿಗಳು, ಲೂಟಿಕೋರರು, ತಾನು, ತನ್ನ ಕುಟುಂಬ ಮಾತ್ರ ಬೆಳೆದರೆ ಸಾಕು, ಅದಕ್ಕಾಗಿ ಸಂಪತ್ತು ಶೇಕರಿಸಬೇಕು, ಎಂದು ನಿರ್ಧರಿಸಿ,
ಸಮುದಾಯದ ಪರ ಇರುವ ಎಂಎಸ್ ನಂತಹ ನಾಯಕರನ್ನು, ವ್ಯವಸ್ಥಿತವಾಗಿ ತುಳಿದ ಕಾರಣ ಮುಸ್ಲಿಂ ಸಮಾಜ ಅಕ್ಷರಶಃ ವಿಲವಿಲಗೊಳ್ಳುತ್ತಿದೆ.
ಗಟ್ಟಿಯಾಗಿ ಧ್ವನಿಯೆತ್ತಲು, ಸಾಧ್ಯವಿಲ್ಲದವರ ಕೈಗೆ ಸಿಲುಕಿ, ಒದ್ದಾಡುತ್ತಿದೆ..
*M S ಮರಣಕ್ಕೂ ಮುಂಚೆ ಸಿಗಬಹುದೇ ಸೂಕ್ತ ಸ್ಥಾನಮಾನ*
ವರ್ಷಾನು ವರ್ಷಗಳಿಂದ ಕಾಣುವ ಅದೆಷ್ಟು ಹಿರಿಯರು, ಜಿಲ್ಲೆಯ ಎಲ್ಲಾ ಕಡೆಗಳಲ್ಲಿರುವ ಅಪಾರ ಅಭಿಮಾನಿಗಳು, ಎಂ ಎಸ್, ರವರನ್ನೂ ಒಂದು
ಸೂಕ್ತ ಸ್ಥಾನದಲ್ಲಿ ಕಾಣಲು ಬಯಸಿದವರಾಗಿದ್ದಾರೆ..
ಈಗ ಸರಕಾರ ಕಾಂಗ್ರೆಸ್ ನದ್ದಾಗಿದೆ..
ಈ ಬಾರಿಯೂ ಅದು ಸಾಧ್ಯವಾಗದೇ ಇದ್ದರೆ, ಮರಣದ ನಂತರ ಕೊಟ್ಟರೂ ಅದು ಯಾಕೆ??
ವಂದನೆಗಳೊಂದಿಗೆ




