May 6, 2026

ಯುವತಿಯನ್ನು ಕತ್ತು ಸೀಲಿ ಕೊಂದು ಯುವಕ ಆತ್ಮಹತ್ಯೆ

0
image_editor_output_image2000810718-1709617463167.jpg

ಹಾಸನ: ಹಾಸನದಲ್ಲೊಬ್ಬ ಪಾಗಲ್ ಪ್ರೇಮಿ ಯುವತಿಯನ್ನು ಕತ್ತು ಸೀಲಿ ಕೊಲೆ ಮಾಡಿದ್ದಾನೆ.

ಬಳಿಕ ತಾನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೆಳಗುಂಬ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಮೃತ ಬಾಲಕಿ ಹತ್ತನೇ ತರಗತಿಯ ಭೂಮಿಕಾ ಪಾಪಿಯ ಕೃತ್ಯಕ್ಕೆ ಬಲಿಯಾಗಿದ್ದಾಳೆ.

ಬೆಳಗುಂ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯಾಗಿರುವ ಭೂಮಿಕ ಸೋಮವಾರ ಸಂಜೆ ಶಾಲೆ ಮುಗಿಸಿ ಮನೆಗೆ ಹೋಗುವಾಗ ಅಡ್ಡಗಟ್ಟಿದ ಪಾಪಿ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಕೊಲೆ ನಡೆಸಿದ ಬಳಿಕ ಅರಸೀಕೆರೆ ಸಮೀಪ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶರತ್ (23) ಎಂಬಾತ ಭೂಮಿಕಳಾನ್ನು ಪ್ರೀತಿಸುವಂತೆ ಪೀಡಿಸಿದ್ದು, ಆತನ ಪ್ರೀತಿಯನ್ನು ಒಪ್ಪಿಲ್ಲ ಅನ್ನೋ ಕಾರಣಕ್ಕೆ ಭೂಮಿಕಾಳ ಕತ್ತು ಸೀಲಿ ಕೊಲೆ ಮಾಡಿದ್ದಾನೆ. ಅರಸೀಕೆರೆ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮಾಡುತ್ತಿದ್ದ ಶರತ್ ಅರಸೀಕೆರೆಯ ಜಾಡಘಟ್ಟ ಗ್ರಾಮದ ನಿವಾಸಿಯಾಗಿದ್ದ. ಘಟನಾ ಸ್ಥಳಕ್ಕೆ ಹಾಸನ ಎಸ್‌ಪಿ ಮಹಮ್ಮದ್ ಸುಜಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!