ಗ್ರಾಮ ದೇವತೆ ಜಾತ್ರೆಯಲ್ಲಿ ಯುವಕನ ಕೊಲೆ
ರಾಯಚೂರು: ಗ್ರಾಮ ದೇವತೆ ಜಾತ್ರೆಗೆ ಬೆಂಗಳೂರಿನಿಂದ ಊರಿಗೆ ಬಂದಿದ್ದವನನ್ನ ಕೊಲೆ ಮಾಡಿದ ಘಟನೆ ಜಿಲ್ಲೆಯ ಮಾನ್ವಿ ತಾಲ್ಲೂಕಿನ ನಿರಮಾನ್ವಿ ಗ್ರಾಮದಲ್ಲಿ ನಡೆದಿದೆ.
ಸುರೇಶ್(20) ಮೃತ ರ್ದುದೈವಿ. ಈ ಗ್ರಾಮದಲ್ಲಿ ಪ್ರತಿವರ್ಷ ಫೆಬ್ರವರಿ ಕೊನೆಯಲ್ಲಿ ರೇಣುಕಾ ಯಲ್ಲಮ್ಮದೇವಿ ಜಾತ್ರೆ ನಡೆಯುತ್ತದೆ. ಕಲ್ಯಾಣ ಕರ್ನಾಟಕ ಭಾಗದ ಲಕ್ಷಾಂತರ ಭಕ್ತರು ಇಲ್ಲಿಗೆ ಬಂದು ಹರಕೆ ತೀರಿಸುತ್ತಾರೆ.
ಅದೇ ರೀತಿ ಈ ಗ್ರಾಮದ ಜನ ಕೂಡ ಪ್ರತಿ ವರ್ಷ ಯಲ್ಲಮ್ಮದೇವಿಗೆ ಮರಿ ಬಲಿ ಕೊಟ್ಟು ಪೂಜೆ ಮಾಡುತ್ತಾರೆ. ನಿರಮಾನ್ವಿ ಗ್ರಾಮದ ನಾಗೇಶ್ ಕುಟುಂಬ ಕೂಡ ದೇವಿಗೆ ಮರಿ ಹೊಡೆಯಲು ಮುಂದಾಗಿದ್ದರು.





