December 19, 2025

ಉಡುಪಿ: ಏಕಾಂಗಿಯಾಗಿ ಮನೆಯಲ್ಲಿ ವಾಸಿಸುತ್ತಿದ್ದ ಯುವಕನ ಕೊಲೆ

0
image_editor_output_image-1278996933-1709495870083.jpg

ಉಡುಪಿ: ಏಕಾಂಗಿಯಾಗಿ ಮನೆಯಲ್ಲಿ ವಾಸಿಸುತ್ತಿದ್ದ ಯುವಕನನ್ನು ದುಷ್ಕರ್ಮಿಗಳು ಶೂಟ್ ಮಾಡಿ ಕೊಲೆ ಮಾಡಿದ ಘಟನೆ ಬ್ರಹ್ಮಾವರ ತಾಲೂಕಿನ ಹನೆಹಳ್ಳಿಯಲ್ಲಿ ನಡೆದಿದೆ.

ಮೃತ ಯುವಕನನ್ನು ಕೃಷ್ಣ (36) ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ 9:30ರ ವೇಳೆಗೆ ಕೃಷ್ಣ ಎಂಬುವವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಅಕ್ಕ ಪಕ್ಕದ ನಿವಾಸಿಗಳಿಗೆ ಫೈರಿಂಗ್ ಶಬ್ದ ಕೇಳಿದೆ. ಆದರೆ ಅವರು ಪಟಾಕಿಯ ಶಬ್ದವೆಂದು ಸುಮ್ಮನಾಗಿದ್ದಾರಂತೆ. ಇನ್ನು ಇಂದು ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!