ತಾಯಿಯನ್ನು ಹತ್ಯೆಗೈದು, ಬಳಿಕ ನೇಣಿಗೆ ಶರಣಾದ ಪುತ್ರ
ಧಾರವಾಡ: ಹಣಕ್ಕಾಗಿ ವ್ಯಕ್ತಿಯೊಬ್ಬ ತನ್ನ ತಾಯಿಯ ಮೇಲೆ ರಾಡ್‍ನಿಂದ ಹಲ್ಲೆ ನಡೆಸಿ ಹತ್ಯೆಗೈದು, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹೊಸಯಲ್ಲಾಪುರದ ಉಡುಪಿ ಓಣಿಯಲ್ಲಿ ನಡೆದಿದೆ.
ಶಾರದಾ ಭಜಂತ್ರಿ (60) ಎಂಬ ಮಹಿಳೆ ತನ್ನ ಮಗನಿಂದಲೇ ಹತ್ಯೆಯಾಗಿದ್ದು, ಆಕೆಯ ಮಗ ರಾಜೇಂದ್ರ ಭಜಂತ್ರಿ (40) ಎಂಬಾತನೇ ಆಕೆಯನ್ನು ಹತ್ಯೆ ಮಾಡಿದ್ದಾನೆ. ಕೊನೆಗೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ





