ಸಂಸದ ಡಾ. ಉಮೇಶ ಜಾಧವ್ ಬೆಂಬಲಿಗನ ಬರ್ಬರ ಹತ್ಯೆ

ಕಲಬುರಗಿ: ನಾಲ್ಕು ದಿನಗಳ ಹಿಂದೆಯಷ್ಟೇ ಬಿಎಸ್ಎನ್ಎಲ್ ಗೆ ಸಲಹಾ ಸಮಿತಿ ಸದಸ್ಯನಾಗಿ ನೇಮಕವಾಗಿದ್ದ, ಸಂಸದ ಡಾ. ಉಮೇಶ ಜಾಧವ್ ಬೆಂಬಲಿಗನನ್ನು ಕಣ್ಣಿಗೆ ಖಾರದ ಪುಡಿ ಎರಚಿ ಬರ್ಬರವಾಗಿ ಹತ್ಯೆಗೈದ ಘಟನೆ ಅಫಜಲಪುರ ತಾಲೂಕಿನ ಭೀಮಾ ತೀರ ಸಾಗನೂರ ಗ್ರಾಮದಲ್ಲಿ ನಡೆದಿದೆ.
ಗಿರೀಶ್ ಚಕ್ರ ಬರ್ಬರವಾಗಿ ಹತ್ಯೆಯಾದ ಬಿಜೆಪಿ ಮುಖಂಡ. ಸಾಗನೂರ ಗ್ರಾಮದ ಜಮೀನಿನಲ್ಲಿ ಕಳೆದ ರಾತ್ರಿ ಕೊಲೆ ನಡೆದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಬಿಎಸ್ಎನ್ಎಲ್ ಸಲಹಾ ಸಮಿತಿ ನಿರ್ದೇಶಕ ನೇಮಕ ಹಿನ್ನೆಲೆಯಲ್ಲಿ ಪಾರ್ಟಿ ಕೊಡುವುದಾಗಿ ಜಮೀನಿಗೆ ಕರೆಯಿಸಿ ಸ್ನೇಹಿತರೇ ಬರ್ಬರ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಕೊಲೆಗೂ ಮುನ್ನ ಕಣ್ಣಿಗೆ ಖಾರದ ಪುಡಿ ಎರಚಿ ನಂತರ ಹತ್ಯೆ ಮಾಡಲಾಗಿದೆ.