ಮಂಗಳೂರು: ವಸತಿ ನಿಲಯದಿಂದ ಮೊಬೈಲ್ ಕಳ್ಳತನ: ಆರೋಪಿಯ ಬಂಧನ: 3ವರ್ಷ ಸಜೆ, 5 ಸಾವಿರ ದಂಡ
ಮಂಗಳೂರು: ಉರ್ವಾ ದೇವರಾಜು ಅರಸು ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದ ಒಳಗೆ ಪ್ರವೇಶಿಸಿ ವಿದ್ಯಾರ್ಥಿನಿಯರ 3 ಮೊಬೈಲ್ ಫೋನ್ ಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಮಹೇಶ್ ಪೈ ಎಂದು ಗುರುತಿಸಲಾಗಿದೆ.
ಇನ್ನು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜಪಡಿಸಿ, ದೋಷರೋಪಣಾ ಪಟ್ಟಿಸಲ್ಲಿಸಲಾಗಿದೆ. ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಸಿಜಿಎಂ ಕೋರ್ಟ್ ಮಂಗಳೂರು ನ್ಯಾಯಾಲಯವು ಆರೋಪಿಗೆ ಮೂರು ವರ್ಷ ಶಿಕ್ಷೆ ಮತ್ತು 5000 ದಂಡ ವಿಧಿಸಿ ಆದೇಶ ಹೊರಡಿಸಿದೆ.
ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣದಲ್ಲಿ ದಾಖಲಾಗಿದೆ.





