SKSSF ಉಕ್ಕುಡ ಶಾಖೆ ಕಛೇರಿ ಉದ್ಘಾಟನೆ
ವಿಟ್ಲ: ಸಮಸ್ತ ಕೇರಳ ಜಂ ಇಯತುಲ್ ಉಲಮಾ ಇದರ ಅಂಗ ಸಂಸ್ಥೆಯಾದ ಸಮಸ್ತ ಕೇರಳ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಇದರ SKSSF ಉಕ್ಕುಡ ಶಾಖೆಯ ನೂತನ ಕಛೇರಿ ಉದ್ಘಾಟನಾ ಕಾರ್ಯಕ್ರಮವು 25 ಫೆಬ್ರವರಿ 2024 ಬೆಳಿಗ್ಗೆ 10.30ಕ್ಕೆ ನಡೆಯಿತು.

ಬಹು ಅಸ್ಸಯದ್ KS ಅಲೀ ತಂಗಲ್ ಕುಂಬೊಳ್ ಕಛೇರಿ ಉದ್ಘಾಟನೆ ಹಾಗೂ ಭಾಷಣ ನಡೆಸಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಬಾಂಬ್ರಣ ಉಸ್ತಾದ್ ಧ್ವಜಾರೋಹಣ ನಡೆಸಿ ಮುಖ್ಯ ಭಾಷಣಗೈದರು.
MS ಮುಹಮ್ಮದ್ ಸಭೆಯಲ್ಲಿ ಆಶಂಸೆ ಕೋರಿದರು. ಸಭೆಯಲ್ಲಿ ಖಾಸಿಂ ದಾರಿಮಿ, ಅಬ್ಬಾಸ್ ದಾರಿಮಿ, ನಸೀಹ್ ದಾರಿಮಿ, ಉಮರ್ ದಾರಿಮಿ, ಅಶ್ರಫ್ ಕುಂಡಡ್ಕ, ಮುಹಮ್ಮದ್ ಉಕ್ಕುಡ, ರಹೀಂ ಶಾನ್, ಅಬ್ಬಾಸ್ THMA, ಹಮೀದ್ THMA, ಜುನೈದ್ ಅನ್ಸಾರಿ, ಎಂ.ಎಸ್ ಹಮೀದ್, ಸಿ.ಎಚ್ ಇಬ್ರಾಹಿಂ ಮುಸ್ಲಿಯಾರ್ ಹಾಗೂ ಇನ್ನಿತರ ಶಾಖೆಯ ಪದಾಧಿಕಾರಿಗಳು, ಸಮಸ್ತ ಅಭಿಮಾನಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
ಶಫೀಕ್ ಅಝ್ಹರಿ ಉಸ್ತಾದರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಗಫೂರ್ ಹನೀಫಿ ಧನ್ಯವಾದ ಕೋರಿ ಮಾತನಾಡಿದರು. ಕೊನೆಯಲ್ಲಿ ತಬರ್ರುಕ್ ವಿತರಣೆ ನಡೆಯಿತು.




