ಮಗನಿಗೆ ಕಿರುಕುಳ ನೀಡಿದ್ದ ಆರೋಪ ಪ್ರಕರಣ:
ತಾಯಿ ದೋಷಮುಕ್ತೆ ಎಂದು ಎತ್ತಿ ಹಿಡಿದ ನ್ಯಾಯಾಲಯ
ತಿರುವನಂತಪುರಂ: ಕಡಕ್ಕಾವೂರಿನಲ್ಲಿ ಮಗನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಸುಳ್ಳು ದೂರಿನಲ್ಲಿ ತಾಯಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ತಿರುವನಂತಪುರಂ ಪೋಕ್ಸೋ ನ್ಯಾಯಾಲಯ ಪ್ರಕರಣದಲ್ಲಿ ದೂರುದಾರನ ತಾಯಿಯನ್ನು ಖುಲಾಸೆಗೊಳಿಸಿದೆ. ತಾಯಿ ತನ್ನ 13 ವರ್ಷದ ಮಗನಿಗೆ ಮೂರು ವರ್ಷಗಳ ಕಾಲ ಕಿರುಕುಳ ನೀಡಿದ್ದಾಳೆ ಎಂದು ಪ್ರಕರಣದಲ್ಲಿ ಆರೋಪಿಸಲಾಗಿದೆ.
ಈ ಹಿಂದೆ ಐಜಿ ಅರ್ಶಿತಾ ಅಟ್ಟಲ್ಲೂರಿ ನೇತೃತ್ವದ ವಿಶೇಷ ತನಿಖಾ ತಂಡ ಪ್ರಕರಣದಲ್ಲಿ ತಾಯಿ ವಿರುದ್ಧದ ಆರೋಪ ಸುಳ್ಳು ಎಂದು ಪತ್ತೆ ಹಚ್ಚಿತ್ತು. ತನಿಖಾ ತಂಡ ಸಲ್ಲಿಸಿದ ವರದಿಯನ್ನು ಪೋಕ್ಸೋ ಕೋರ್ಟ್ ಶನಿವಾರ ಎತ್ತಿ ಹಿಡಿದಿದೆ. ನ್ಯಾಯಾಲಯವು ತಾಯಿಯ ವಿರುದ್ಧದ ಕಾನೂನು ಪ್ರಕ್ರಿಯೆಗಳನ್ನು ಕೊನೆಗೊಳಿಸಿತು.
ದೂರು ಸುಳ್ಳು ಎಂದು ವಿಶೇಷ ತನಿಖಾ ತಂಡದ ವರದಿ ವಿರುದ್ಧ ಆಕೆಯ ಪತಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ತಿರುವನಂತಪುರಂನ ಪೋಕ್ಸೋ ನ್ಯಾಯಾಲಯ ಈ ಆದೇಶ ನೀಡಿದೆ.
2017 ರಿಂದ 2020 ರ ನಡುವೆ ತನ್ನ ತಾಯಿ ಲೈಂಗಿಕ ಕಿರುಕುಳ ನೀಡಿದ್ದಾಳೆ ಎಂದು ಮಗ ದೂರಿದ್ದಾನೆ. ಇದರ ಆಧಾರದ ಮೇಲೆ ಕಡಕ್ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, 2020ರ ಡಿಸೆಂಬರ್ 28ರಂದು ತಾಯಿಯನ್ನು ಬಂಧಿಸಿದ್ದರು. ನಂತರ ಅವರನ್ನು ಒಂದು ತಿಂಗಳು ಜೈಲಿನಲ್ಲಿರಿಸಲಾಗಿತ್ತು.
ನಂತರ ಹೈಕೋರ್ಟ್ ನಿರ್ದೇಶನದಂತೆ ವಿಶೇಷ ತಂಡ ಪ್ರಕರಣ ತನಿಖೆಯನ್ನು ಕೈಗೊಂಡಿತ್ತು. ತನಿಖಾ ತಂಡವು ತಾಯಿಯ ವಿರುದ್ಧ ಮಗನ ದೂರು ಮತ್ತು ಹೇಳಿಕೆಯನ್ನು ಕಪೋಲಕಲ್ಪಿತವಾಗಿರುವುದನ್ನು ಪತ್ತೆ ಮಾಡಿದೆ.





