ಪದವಿ ವಿದ್ಯಾರ್ಥಿನಿಯನ್ನು ಕಾಲೇಜಿನ ಖಾಲಿ ಕೊಠಡಿಗೆ ಎಳೆದೊಯ್ದು ಅತ್ಯಾಚಾರ:
ಆರೋಪಿಯ ಬಂಧನ
ಕೋಲ್ಕತ್ತಾ: ಕಾಲೇಜಿನೊಳಗೆ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾದ ಘಟನೆ ಕೂಚ್ ಬೆಹಾರ್ ತೂಫಾನ್ಗಂಜ್‌ನ ಕಾಲೇಜೊಂದರಲ್ಲಿ ನಡೆದಿದೆ. ಎರಡನೇ ವರ್ಷದ ಪದವಿ ವಿದ್ಯಾರ್ಥಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನವೆಂಬರ್ 30 ರಂದು ನಡೆದಿದ್ದು, ಕಾಲೇಜಿಗೆ ನುಗ್ಗಿದ ದುಷ್ಕರ್ಮಿ ತನ್ನನ್ನು ಖಾಲಿ ಕೋಣೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿ ದೂರಿದ್ದಾಳೆ. ಬಳಿಕ ಮನೆಗೆ ಮರಳಿದ ಬಾಲಕಿ ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ದೂರು ನೀಡಲು ನಿರಾಕರಿಸಿದ ಅವರು ಶುಕ್ರವಾರ ದೂರು ನೀಡಲು ನಿರ್ಧರಿಸಿದ್ದಾರೆ. ಕಾಲೇಜಿನಲ್ಲಿ ಭದ್ರತೆ ಕೊರತೆಯಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.





