ಕಾಸರಗೋಡು: ಮದುವೆಯ ದಿನವೇ ಪೊಲೀಸ್ ಪೇದೆ ನೇಣಿಗೆ ಶರಣು
ಕಾಸರಗೋಡು: ಕಾಸರಗೋಡು ಎಆರ್ ಕ್ಯಾಂಪ್ ನಲ್ಲಿ ಪೊಲೀಸ್ ಪೇದೆಯೊಬ್ಬರು ನೇಣಿಗೆ ಶರಣಾದ ಘಟನೆ ನಡೆದಿದೆ. ಚೀಮೇನಿ ಆಲಂತಟ್ಟಾ ನಿವಾಸಿ ವಿನೀಶ್ ನೇಣಿಗೆ ಶರಣಾಗಿದ್ದಾರೆ.
ವಿನೀಶ್ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಭಾನುವಾರ ಬೆಳಗ್ಗೆ ವಿನೀಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿನೀಶ್ ಅವರ ಮದುವೆ ಇಂದು ನಡೆಯಬೇಕಿತ್ತು. ಆತ್ಮಹತ್ಯೆಗೆ ಕಾರಣಗಳು ಸ್ಪಷ್ಟವಾಗಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಣೆ ಸೇರಿದಂತೆ ಇತರೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ.





