March 21, 2026

ಹಾರ್ನ್ ಮಾಡಿದ್ದಕ್ಕೆ ಸಾರಿಗೆ ಬಸ್ ಅಡ್ಡಗಟ್ಟಿ ಯುವಕರ ತಂಡದಿಂದ ಡ್ರೈವರ್ ಗೆ ಹಲ್ಲೆ

0
image_editor_output_image855964574-1707468613803.jpg

ಗದಗ: ಹಾರ್ನ್ ಮಾಡಿದ್ದಕ್ಕೆ ಸಾರಿಗೆ ಬಸ್ ಅಡ್ಡಗಟ್ಟಿದ ಯುವಕರ ತಂಡವೊಂದು ಪುಂಡಾಟ ಮೆರೆದ ಘಟನೆ ಗದಗ ಹೊರವಲಯದ ಅಸುಂಡಿ ಬಳಿ ನಡೆದಿದೆ.

ಸಾರಿಗೆ ಬಸ್ ಗದಗದಿಂದ ಹುಬ್ಬಳ್ಳಿ ಕಡೆಗೆ ಹೊರಟಿತ್ತು. ಇದೇ ವೇಳೆ ನಾಲ್ವರು ಅಸುಂಡಿ ಬಳಿ ಸ್ವಿಫ್ಟ್ ಕಾರ್ ನಲ್ಲಿ ಹೊರಟಿದ್ದರು. ಹಿಂಬದಿಯಿಂದ ಹೊರಟಿದ್ದ ಸಾರಿಗೆ ಬಸ್ ಚಾಲಕ ಹಾರ್ನ್ ಮಾಡಿದ್ದಾನೆ. ಕಾರ್ ಸೈಡ್ ಮಿರರ್ ಕ್ಲೋಸ್ ಮಾಡಿದ್ದನ್ನು ಗಮನಿಸಿ ಐದಾರು ಬಾರಿ ಬಸ್ ಡ್ರೈವರ್ ಹಾರ್ನ್ ಮಾಡಿದ್ದ. ಇದಕ್ಕೆ ಕೋಪಗೊಂಡ ಯುವಕರ ತಂಡ ಬಸ್ ನಿಲ್ಲಿಸಿ ವಾಗ್ವಾದಕ್ಕಿಳಿದ್ದಾರೆ.

ಸ್ವಿಫ್ಟ್ ನಲ್ಲಿ ಹೊರಟಿದ್ದ ನಾಲ್ವರು ಬಸ್ ಅಡ್ಡಗಟ್ಟಿ ರಂಪಾಟ ಮಾಡಿದ್ದಾರೆ. ಯಾಕೆ ಹಾರ್ನ್ ಹಾಕಿದೆ ಎಂದು ತಗಾದೆ ತೆಗೆದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಗಲಾಟೆಯಲ್ಲಿ ಬಸ್ ಡ್ರೈವರ್ ಸಂತೋಷ್ ಅಸೂಟಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!