ಸೌದಿ ಅರೇಬಿಯಾದ ದಮಾಮ್ ನ ಸಫ್ವಾ ದಲ್ಲಿ 17 ನೇ ವಿಶ್ವ ಕನ್ನಡ ಸಮ್ಮೇಳನ: ಸಾಮಾಜಿಕ ಕಾರ್ಯಕರ್ತ, ಸಂಘಟಕ ರಶೀದ್ ವಿಟ್ಲರಿಗೆ ಗೌರವ

ಸೌದಿ ಅರೇಬಿಯಾದ ದಮಾಮ್ ನ ಸಫ್ವಾ ದಲ್ಲಿ ಗುರುವಾರ ಮತ್ತು ಶುಕ್ರವಾರ ನಡೆದ 17 ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಾಮಾಜಿಕ ಕಾರ್ಯಕರ್ತ, ಸಂಘಟಕ ರಶೀದ್ ವಿಟ್ಲ ಅವರನ್ನು ಗೌರವಿಸಲಾಯಿತು.
ಜುಬೈಲ್ ಅಲ್ ಮುಝೈನ್ ಸಂಸ್ಥೆಯ ಸಿಇಒ ಝಕರಿಯಾ ಬಜ್ಪೆ, ಎಕ್ಸ್ ಪರ್ಟೈಸ್ ಗ್ರೂಪ್ ಚೆಯರ್ಮೇನ್ ಶೇಖ್ ಕರ್ನಿರೆ, ಉದ್ಯಮಿ ಫಾರೂಕ್ ಪೋರ್ಟ್ ವೇ, ಸಮ್ಮೇಳನ ಸ್ವಾಗತ ಸಮಿತಿಯ ಕಾರ್ಯದರ್ಶಿ ರಫೀಕ್ ಸೂರಿಂಜೆ ಉಪಸ್ಥಿತರಿದ್ದರು.
ಎಂಟು ತಾಸುಗಳ ಕಾಲ ನಡೆದ ಸಮ್ಮೇಳನದಲ್ಲಿ ರಾಜ್ಯದ ಕಲಾವಿದರಿಂದ ಕನ್ನಡ ನಾಡಿನ ವಿವಿಧ ಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನು ಪ್ರದರ್ಶಿಸಲಾಯಿತು.