ಉಜಿರೆಯ ಖಾಸಗಿ ಕಾಲೇಜಿನ ಮುಸ್ಲಿಂ ಯುವಕನಿಗೆ ಹಲ್ಲೆ: ಬಜರಂಗದಳದ 7 ಮಂದಿ ಕಾರ್ಯಕರ್ತರ ಬಂಧನ
ಚಿಕ್ಕಮಗಳೂರು: ಉಜಿರೆಯ ಖಾಸಗಿ ಕಾಲೇಜಿನ ಡ್ಯಾನ್ಸ್ ಮಾಸ್ಟರ್ ಆಗಿರುವ ಮುಸ್ಲಿಂ ಯುವಕನಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ 7 ಜನ ಭಜರಂಗದಳ ಕಾರ್ಯಕರ್ತರನ್ನು ಆಲ್ದೂರು ಪೊಲೀಸರು ಬಂಧಿಸಿದ್ದಾರೆ.
ಉಜಿರೆಯ ಖಾಸಗಿ ಕಾಲೇಜಿನ ಡ್ಯಾನ್ಸ್ ಮಾಸ್ಟರ್ ಆಗಿರುವ ಮುಸ್ಲಿಂ ಯುವಕ ರೂಮನ್ ಎಂಬಾತ ಅಪ್ರಾಪ್ತೆಯ ಜೊತೆ ಸುತ್ತಾಡುತ್ತಿದ್ದ ಎಂದು ಆರೋಪಿಸಿ ಭಜರಂಗದಳದ ಕಾರ್ಯಕರ್ತರು ಆತನ ಮೇಲೆ ಗುರುವಾರ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.
ಇದೀಗ ಭಜರಂಗದಳ ಜಿಲ್ಲಾ ಸಂಚಾಲಕ ಸಿಡಿ ಶಿವಕುಮಾರ್, ಸ್ವರೂಪ್ ಕಾರ್ತಿಕ್, ಮಧು, ರಂಜಿತ್ ಮತ್ತು ಪರೀಕ್ಷಿತ್ ಪ್ರಜ್ವಲ್ ಎಂಬವರನ್ನು ಆಲ್ದೂರು ಪೊಲೀಸರು ಬಂಧಿಸಿದ್ದಾರೆ.




