June 26, 2026

ಮುಸ್ಲಿಂ ಜಮಾಅತ್ ಉಕ್ಕುಡ ಸರ್ಕಲ್ ವತಿಯಿಂದ ಮಾನವೀಯ ಸೇವೆ: ಕಾನತ್ತಡ್ಕದಲ್ಲಿ ಬಡ  ರೋಗಿಗೆ ಸಾಂತ್ವನದ ಮನೆ ಹಸ್ತಾಂತರ

0
image_editor_output_image1112706904-1782490283440

ವಿಟ್ಲ : ವಿಟ್ಲದ ಹೋಟೆಲ್ ಕಾರ್ಮಿಕರಾಗಿ ದುಡಿಯುತ್ತಿದ್ದ ಅನಾರೋಗ್ಯ ಪೀಡಿತ ಕಾನತಡ್ಕ ಯೂಸುಫ್ ಅವರಿಗೆ ಮುಸ್ಲಿಂ ಜಮಾಅತ್ ಉಕ್ಕುಡ ಸರ್ಕಲ್ ಸಮಿತಿ ಕಾನತಡ್ಕ ಬದ್ರಿಯಾ ಮಸೀದಿ ಸಹಕಾರದಲ್ಲಿ ಸುಮಾರು ೧೦ ಲಕ್ಷ ವೆಚ್ಚದ  ಸಾಂತ್ವನದ ಬೀಡು ಎಂಬ  ಮನೆಯನ್ನು ನಿರ್ಮಿಸಿ  ಹಸ್ತಾಂತರಿಸಲಾಯಿತು.

ಸೈಯದ್ ಮುಕ್ತಾರ್  ತಂಙಳ್ ಕುಂಬೋಲ್ ದುಆಃ ನಡೆಸಿ  ಯೂಸುಫ್  ರವರಿಗೆ   ಕೀ ನೀಡುವ ಮೂಲಕ ಹಸ್ತಾಂತರಿಸಿದರು. ಸಯ್ಯದ್ ಹಬೀಬುಲ್ಲಾಹ್ ಪೂಕೋಯಾ ತಂಙಳ್ ಪೆರುವಾಯಿ ಕಾರ್ಯಕ್ರಮ ಉದ್ಘಾಟಿಸಿದರು. ಅಲ್ ಬದ್ರಿಯಾ ಜುಮಾ ಮಸೀದಿ ಕಾನತಡ್ಕ ಅಧ್ಯಕ್ಷ  ಹಮೀದ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಯ್ಯದ್ ಶಿಹಾಬುದ್ದೀನ್  ತಂಗಳ್ ಮದಕ ಮಹಳರತುಲ್ ಬದ್ರಿಯಾ ಮಜ್ಲಿಸಿಗೆ ನೇತೃತ್ವ ವಹಿಸಿದ್ದರು. ರಫೀಕ್ ಸಅದಿ ದೇಲಂಪಾಡಿ ಮುಖ್ಯ ಪ್ರಭಾಷಣ  ನಡೆಸಿದರು.

ವಾಲೆಮುಂಡೋವು* ಮಹಮೂದುಲ್ ಫೈಝಿ, ಇಬ್ರಾಹಿಂ ಫೈಝಿ ಕನ್ಯಾನ, ಮುಸ್ಲಿಂ ಜಮಾಅತ್ ಈಸ್ಟ್ ಜಿಲ್ಲಾಧ್ಯಕ್ಷ ಜಿ ಎಂ ಮಹಮ್ಮದ್ ಕಾಮಿಲ್ ಸಖಾಫಿ, ಸ್ಥಳಿಯ ಖತೀಬ್ ರಝಕ್ ನಹೀಮಿ, ಸುನ್ನಿ ಕೋ ಆರ್ಡಿನೇಷನ್ ವಿಟ್ಲ ಅಧ್ಯಕ್ಷ ಇಬ್ರಾಹಿಂ ಮದನಿ ಕಂಬಳಬೆಟ್ಟು ಸುನ್ನಿ ಫೈಝಿ ಪೆರುವಾಯಿ, ಎಂ ಎಸ್ ಮಹಮ್ಮದ್,  ಶಾಕಿರ್ ಅಳಕೆಮಜಲು ಶುಭ ಹಾರೈಸಿದರು.

ಅಹಮದ್ ಶರೀಫ್ ಸಖಾಫಿ ಅಲ್ ಫಾಲಿಳಿ ಉಕ್ಕುಡ,  ವಿಟ್ಲ ಪಟ್ಟಣ ಪಂಚಾಯಿತಿ  ಸದಸ್ಯ ಹಸೈನಾರ್  ನೆಲ್ಲಿಗುಡ್ಡೆ, ಕೆಎಂಜೆ ಉಕ್ಕುಡ ಸರ್ಕಲ್ ಅಧ್ಯಕ್ಷ ರಹೀಮ್ ಹಾಜಿ ಬೈರಿಕಟ್ಟೆ, ಮುಹೀನುದ್ದೀನ್ ಹಾಜಿ ಕಾನತಡ್ಕ,  ಖಾದರ್ ಹಾಜಿ, ಯೂನುಸ್  ಕಾನತಡ್ಕ, ಡಿ ಕೆ ಖಾದರ್  ಮೊದಲಾದವರು ಉಪಸ್ಥಿತರಿದ್ದರು.

ಹಮೀದ್ ಹಾಜಿ ಕೊಡುಂಗಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ಮಾಣ ಸಮಿತಿ ಕಾರ್ಯದರ್ಶಿ ಸಲೀಂ ಹಾಜಿ ಸ್ವಾಗತಿಸಿದರು. ಎಸ್ ವೈ ಎಸ್ ಉಕ್ಕುಡ ಸರ್ಕಲ್ ಅಧ್ಯಕ್ಷ ಸಿದ್ದೀಕ್ ಸಖಾಫಿ ಪೆರುವಾಯಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!