June 26, 2026

ಕೊಡಂಗಾಯಿ: ಸಮಸ್ತ ಸ್ಥಾಪನಾ ದಿನ, ಮರ್ಹೂಂ ಶೈಖುನಾ ತ್ವಾಖಾ ಉಸ್ತಾದ್ ಅನುಸ್ಮರಣೆ

0
IMG-20260626-WA0128

ವಿಟ್ಲ :ಸಿರಾಜುಲ್ ಇಸ್ಲಾಂ ಮದ್ರಸ [SKIMVB 7368] ಮುಹ್ಯದ್ದೀನ್ ಜುಮಾ ಮಸೀದಿ ಕೊಡಂಗಾಯಿ ಇದರ ವಿದ್ಯಾರ್ಥಿ ಸಂಘಟನೆಯಾದ SKSBV ಹಾಗೂ ಪೋಷಕ ಸಮಿತಿ ವತಿಯಿಂದ ‘ಸಮಸ್ತ’ ಸ್ಥಾಪಕ ದಿನದ ಪ್ರಯುಕ್ತ ಧ್ವಜಾರೋಹಣ ಹಾಗೂ ಮರ್ಹೂಂ ಶೈಖುನಾ ತ್ವಾಖಾ ಉಸ್ತಾದರ ಅನುಸ್ಮರಣಾ ಕಾರ್ಯಕ್ರಮವು ಎಂ ಜೆ ಎಂ ವಠಾರದಲ್ಲಿ ನಡೆಯಿತು.


    ಜಮಾಅತ್ ಅಧ್ಯಕ್ಷರಾದ ಬಹು|ಅಬ್ದುಲ್ಲ ಕುಂಞ ಮೂರ್ಜೆಬೆಟ್ಟು ಧ್ವಜಾರೋಹಣ ನೆರವೇರಿಸಿದರು.
   ಖತೀಬ್ ಬಿ ಎ ಸಿದ್ದೀಕ್ ಅರ್ಷದಿ ಉಸ್ತಾದರು  ದುಆ ನೆರವೇರಿಸಿ  ‘ಸಮಸ್ತ’ ಸಂಘಟನೆಯು 1926ರ ಜೂನ್ 26ರಂದು ಸ್ಥಾಪಿತಗೊಂಡಿದ್ದು, ಇಸ್ಲಾಮಿನ ಶುದ್ಧ ಸಂದೇಶವನ್ನು ಪ್ರಚಾರ ಪಡಿಸುವುದು ಅಹ್ಲುಸ್ಸುನ್ನತಿ ವಲ್ ಜಮಾಅತ್‌ನ ಆಶಯ ,ಆದರ್ಶವನ್ನು ಸಂರಕ್ಷಿಸುವುದು ಮತ್ತು ಸಮಾಜದಲ್ಲಿ ಧಾರ್ಮಿಕ ಹಾಗೂ ಶೈಕ್ಷಣಿಕ ಜಾಗೃತಿ ಮೂಡಿಸುವುದು ‘ಸಮಸ್ತ’ದ ಮುಖ್ಯ ಉದ್ದೇಶವಾಗಿದೆ ಎಂದರು.


   ಇಬ್ರಾಹಿಂ ಝ್ಹೈನಿ ಮಾತನಾಡಿ,
ಕಳೆದ ಒಂದು ಶತಮಾನದಿಂದ ಸಮಸ್ತವು ಮದರಸಾ ಶಿಕ್ಷಣ, ದಅ್ವತ್, ಸಾಮಾಜಿಕ ಸೇವೆ ಮತ್ತು ಮಾನವೀಯ ಕಾರ್ಯಗಳ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ. ಸಮಸ್ತ ಸ್ಥಾಪನೆ ದಿನವು ಈ ಮಹಾನ್ ಪರಂಪರೆಯನ್ನು ಸ್ಮರಿಸುವ ಹಾಗೂ ಅದರ ಸೇವೆಗಳನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುವ ದಿನವಾಗಿದೆ ಎಂದರು‌.


   ಶೈಖುನಾ ಮರ್ಹೂಂ  ತ್ವಾಖಾ ಉಸ್ತಾದರ ಅನುಸ್ಮರಣಾ ಭಾಷಣ ಮಾಡಿದ ಕೆ ಎಂ ಎ ಕೊಡುಂಗಾಯಿ ಅವರು, ‘ಸಮಸ್ತ’ ದ ಮುಶಾವರ ಸದಸ್ಯರಾಗಿ, ಖಾಝಿಯಾಗಿ ಧಾರ್ಮಿಕ ,ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿರುವ  ಶೈಖುನಾ ತ್ವಾಖಾ ಉಸ್ತಾದರು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ನೈಜ ನಾಯಕ ರಾಗಿದ್ದರು, ಅವರ ಅಗಲುವಿಕೆ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು‌.


  ಮುಹದ್ದಿನ್ ಬಹು|ಹಂಝ ಝ್ಹುಹ್ರಿ, ಮಹಮ್ಮದ್ ಕುಂಞ ಸನ್ಯಾಸಿ ಹಿತ್ತಿಲು,ಹನೀಫ್ ಪಿ,ಸಾಬಿತ್ ಎಂ, ಅಲೀಮುಲ್ಲಾ,ಹಸನ್ ಬಿ,ಖಾದರ್ ಟಿ ಎಂ,ಮದ್ರಸತುನ್ನೂರಿಯ ಹಾಗೂ ಶಂಸುಲ್ ಹುದಾ ಮದ್ರಸ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ ಕಾರ್ಯಕ್ರಮದಲ್ಲಿ
ಮಜೀದ್ ಟಿ ಎಂ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!