March 21, 2026

ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ವಂಚನೆ: ಮಹಿಳೆಯ ಬಂಧನ

0
image_editor_output_image-1281495335-1707457793335.jpg

ಆನೇಕಲ್: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರು ಬಳಕೆ ಮಾಡಿಕೊಂಡು ಮಹಿಳೆ ಹಾಗೂ ಗ್ಯಾಂಗ್ ವಂಚಿಸಿರುವುದು ಬೆಳಕಿಗೆ ಬಂದಿದೆ.

ನಕಲಿ ಟ್ರಸ್ಟ್ ಮೂಲಕ ಪವಿತ್ರಾ ಆಂಡ್ ಗ್ಯಾಂಗ್ ವಂಚನೆ ಮಾಡಿದೆ. ಪವಿತ್ರಾ ತಮಿಳುನಾಡಿನ ಹೊಸೂರು ಮೂಲದವಳು. ಸದ್ಯ ಆನೇಕಲ್, ಚಂದಾಪುರ, ಸೂರ್ಯ ನಗರ, ಹೊಸಕೋಟೆ ಅತ್ತಿಬೆಲೆಯಲ್ಲಿ ವಂಚನೆ ಪ್ರಕರಣ ಬಯಲಾಗಿದೆ.

ನಾವು ಹೊಸೂರಿನಲ್ಲಿ ಟ್ರಸ್ಟ್ ಓಪನ್ ಮಾಡಿದ್ದೇವೆ. ನಮ್ಮ ಟ್ರಸ್ಟ್‍ಗೆ ಕೇಂದ್ರ ಸರ್ಕಾರದಿಂದ 17,000 ಕೋಟಿ ರೂ. ಹಣ ಬಂದಿದೆ. ನಿರ್ಮಲಾ ಸೀತಾರಾಮನ್ ಅವರು ನಮಗೆ ವರ್ಗಾವಣೆ ಮಾಡಿದ್ದಾರೆ. ಅಮೆರಿಕದಿಂದಲೇ ನಮ್ಮ ಟ್ರಸ್ಟ್‍ಗೆ ಹಣ ಸಂದಾಯ ಆಗಿದೆ.

ಆ ಹಣವನ್ನು ನಾವು ಲೋನ್ ಮೂಲಕ ನಿಮಗೆ ಕೊಡುತ್ತೇವೆ. 10 ಲಕ್ಷ ಕೊಟ್ಟರೆ 5 ಲಕ್ಷ ಮಾತ್ರ ವಾಪಸ್ ಕಟ್ಟಬೇಕು. 5 ಲಕ್ಷ ನಿಮಗೆ ಸಬ್ಸಿಡಿಯಾಗಿ ಸಿಗುತ್ತದೆ. ನೀವು ಲೋನ್ ಪಡಿಬೇಕು ಅಂದ್ರೆ ಮುಂಚಿತವಾಗಿ ಹಣ ಕಟ್ಟಬೇಕು. ಈ ರೀತಿ ಹೇಳಿ ನಯವಂಚಕರ ತಂಡ ವಂಚನೆ ಮಾಡಿದೆ.

Leave a Reply

Your email address will not be published. Required fields are marked *

You may have missed

error: Content is protected !!