February 2, 2026

ಪ್ರಚೋದನಕಾರಿ ಭಾಷಣ ಮಾಡಿದ ಆರೋಪ: ಮುಸ್ಲಿಂ ವಾಗ್ಮಿ ಮುಫ್ತಿ ಸಲ್ಮಾನ್ ಅಝ್ಹರಿ ಬಂಧನ

0
image_editor_output_image1516921760-1707117677203.jpg

ಮುಂಬಯಿ: ಭಾಷಣ ಮಾಡಿದ ಆರೋಪದ ಮೇಲೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್‌ ಹಾಗೂ ಮುಂಬಯಿ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಮುಸ್ಲಿಂ ವಾಗ್ಮಿ ಮುಫ್ತಿ ಸಲ್ಮಾನ್ ಅಝ್ಹರಿ ಅವರನ್ನು ಭಾನುವಾರ ರಾತ್ರಿ(ಫೆ.4 ರಂದು) ಬಂಧಿಸಿದ್ದಾರೆ.

ಇತ್ತೀಚೆಗೆ ಗುಜರಾತ್‌ ನ ಜುನಾಗಢದಲ್ಲಿ ಸಲ್ಮಾನ್ ಅಝ್ಹರಿ ಅವರು ದ್ವೇಷ ಭಾಷಣವನ್ನು ಮಾಡಿದ್ದರು ಎನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಸಂಬಂಧ ಮುಫ್ತಿ ಮತ್ತು ಇತರ ಇಬ್ಬರ ವಿರುದ್ಧ ಸೆಕ್ಷನ್ 153B ಅಡಿಯಲ್ಲಿ ಎಫ್‌ ಐಆರ್‌ ದಾಖಲಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!