ಅಕ್ಷಯಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಮಹಾಸಭೆ
ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ (ರಿ) ಇದರ ಮಹಾಸಭೆಯು ದಿನಾಂಕ :- 30-1-2024 ರಂದು ಲಯನ್ಸ್ ಸೇವಾ ಮಂದಿರ ಬಿ ಸಿ ರೋಡ್ ನಲ್ಲಿ ಝಕರಿಯಾ ನಾರ್ಶ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ವಿಟ್ಲ ಪರ್ತಿಪ್ಪಾಡಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಪಿ.ಯಂ ಹಕೀಂ ಪರ್ತಿಪ್ಪಾಡಿಯವರು ಉದ್ಘಾಟಿಸಿದರು.
ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ ದುಅ ನೆರವೇರಿಸಿದರು.
ಸುಳ್ಯ ನಗರ ಪಂಚಾಯತ್ ಸದಸ್ಯರಾದ ಉಮ್ಮರ್ ಕೆ.ಎಸ್ ಸುಳ್ಯ , ಇರಾ ಗ್ರಾಮ ಪಂಚಾಯತ್ ಸದಸ್ಯರಾದ ರಝಾಕ್ ಕುಕ್ಕಾಜೆ, ಸುಬಾನ್ ಅಹಮದ್ ಹೊನ್ನಾರ ಇವರು ಶುಭ ಹಾರೈಸಿದರು.
ಜಿ.ಯಂ ಮಹಮ್ಮದ್ ಕಾಮಿಲ್ ಸಖಾಫಿ ಉಸ್ತಾದ್ ತರಗತಿ ಮಂಡಿಸಿದರು.
ಸಿದ್ದೀಕ್ ಗೂನಡ್ಕ ವರದಿ ವಾಚಿಸಿದರು, ಸಂಚಾಲಕರಾದ ಇಬ್ರಾಹೀಂ ಕರೀಂ ಕದ್ಕಾರ್ ಇವರು ಲೆಕ್ಕ ಪತ್ರ ಮಂಡಿಸಿದರು. ವರದಿ ಮತ್ತು ಲೆಕ್ಕಪತ್ರವನ್ನು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ನಂತರ ಜಿ.ಯಂ ಮಹಮ್ಮದ್ ಕಾಮಿಲ್ ಸಖಾಫಿ ಉಸ್ತಾದ್ ರವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಗೌರವಧ್ಯಕ್ಷರಾಗಿ ಎಂ.ಎಸ್ ಮಹಮ್ಮದ್, ಗೌರವ ಸಲಹೆಗಾರರಾಗಿ ಅಸ್ಸಯ್ಯದ್ ಖುಬೈಬ್ ತಂಙಳ್ ಉಳ್ಳಾಲ, ಮುಸ್ತಾಫ ಜನತಾ ಸುಳ್ಯ, ಅಬ್ದುಲ್ ರಝಾಕ್ ಕುಕ್ಕಾಜೆ, ಪಿ.ಯಂ ಹಕೀಂ ಪರ್ತಿಪ್ಪಾಡಿ.
ಅಧ್ಯಕ್ಷರಾಗಿ ಝಕರಿಯಾ ನಾರ್ಶ , ಉಪಾಧ್ಯಕ್ಷರಾಗಿ ಸಿ.ಹೆಚ್ ಅಬ್ದುಲ್ ರಝಾಕ್, ಸುಬಾನ್ ಅಹಮದ್ ಹೊನ್ನಾರ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಗೂನಡ್ಕ , ಸಂಚಾಲಕರಾಗಿ ಇಬ್ರಾಹೀಂ ಕರೀಂ ಕದ್ಕಾರ್, ಕೋಶಾಧಿಕಾರಿಯಾಗಿ ಲತೀಫ್ ಪರ್ತಿಪ್ಪಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಉಮ್ಮರ್ ಸುಳ್ಯ , ಸಾಂತ್ವಾನ ಕಾರ್ಯದರ್ಶಿಯಾಗಿ ಅಲ್ತಾಫ್ ಶಾಂತಿಭಾಗ್ , ಲೆಕ್ಕಪರಿಶೋಧಕರಾಗಿ ರಿಝ್ವಾನ್ ಕೃಷ್ಣಾಪುರ,
ಜೊತೆ ಕಾರ್ಯದರ್ಶಿಯಾಗಿ ಹಮೀದ್ ಸಖಾಫಿ ಪಾಣಾಜೆ, ಲತೀಫ್ ಅಜಿಲಮೊಗರು, ಧಾರ್ಮಿಕ ಸಾಂಸ್ಕೃತಿಕ ಕಾರ್ಯದರ್ಶಿ ಮುಬೀನ್ ಉಜಿರೆ, ಮೀಡಿಯ ಕಾರ್ಯದರ್ಶಿಯಾಗಿ ಪೈಝಲ್ ಝುಹರಿ ಕಲ್ಲುಗುಂಡಿ.
ಸದಸ್ಯರುಗಳಾಗಿ ಆಸಿಫ್ ಕೈೂಲ,ಉಸ್ಮಾನ್ ಕುಕ್ಕಾಜೆ, ಫಯಾಝ್ ಕೊಪ್ಪಳ ಮಂಗಳೂರು, ಸಿದ್ದೀಕ್ ಉಡುಪಿ ,ಝೈನುಲ್ ಆಬಿದ್ ಮಡಿಕೇರಿ, ಫಾರೂಕ್ ಮೂಡಿಗೆರೆ, ರಿಯಾಝ್ ನೆಕ್ಕಿಲ, ಹಸೈನಾರ್ ಗುತ್ತಿಗಾರು, ಸ್ವಾಲಿಹ್ ಮುರ, ಮಹಮ್ಮದ್ ಉಳ್ಳಾಲ , ಅಬ್ದುಲ್ಲಾ ನಾರಂಕೋಡಿ, ಕಬೀರ್ ಸುಳ್ಯ , ಸಿದ್ದೀಕ್ ಪರಪ್ಪು , ಇವರನ್ನು ಆಯ್ಕೆ ಮಾಡಲಾಯಿತು. ಇಬ್ರಾಹೀಂ ಕರೀಂ ಕದ್ಕಾರ್ ಸ್ವಾಗತಿಸಿ, ಸಿದ್ದೀಕ್ ಗೂನಡ್ಕ ವಂದಿಸಿದರು.






