March 21, 2026

ಕಾಸರಗೋಡು: ಬಾಲಕಿಯನ್ನು ಹಿಂಬಾಲಿಸಿ ತೊಂದರೆ: ಯುವಕನ ಪೊಲೀಸರ ವಶಕ್ಕೆ

0
IMG-20230504-WA0062.jpg


 
ಕಾಸರಗೋಡು: ವಿದ್ಯಾರ್ಥಿಯನ್ನು ಹಿಂಬಾಲಿಸಿ ಆಕೆಗೆ ಮಾನಸಿಕವಾಗಿ ಕಿರುಕುಳ ನೀಡಿದ ಯುವಕನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮಾನ್ಯ ಕೊಲ್ಲಂಗಾನದ ಅಜ್ಮಲ್(25) ಎಂದು ಗುರುತಿಸಲಾಗಿದೆ.

ಬಾಲಕಿ ಪ್ರಯಾಣಿಸುವ ಬಸ್ಸಿನಲ್ಲೂ, ಬಸ್ಸಿನಿಂದ ಇಳಿದು ನಡೆದು ಹೋಗುವಾಗಲು ಆಕೆಯನ್ನು ಹಿಂಬಾಲಿಸಿ ಈತ ತೊಂದರೆ ನೀಡುತ್ತಿದ್ದ ಎಂದು ದೂರಲಾಗಿದೆ.

ಈತನ ವಿರುದ್ದ ಪೋಕ್ಸೋ ಕೇಸು ದಾಖಲಿಸಲಾಗಿದ್ದು, ಈತನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!