ವಿಟ್ಲ: ನ್ಯಾಯಾಲಯಕ್ಕೆ ಹಾಜರಾಗದೆ 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸರ ವಶಕ್ಕೆ
ವಿಟ್ಲ: ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತೊಕೊಟ್ಟು ನಿವಾಸಿ ಮಹಮ್ಮದ್ ಇಕ್ಬಾಲ್ (36) ಬಂಧಿತ ಆರೋಪಿ.
ವಿಟ್ಲ ಠಾಣಾ ಎಸ್‌ಐ ಜಯರಾಮ, ಪಿಸಿಗಳಾದ ಪುನೀತ್ ಮತ್ತು ವಿನೋದ್ ಎಂಬವರು ಕೊಣಾಜೆ ಠಾಣಾ ಪೊಲೀಸರ ಸಹಕಾರದಿಂದ ಕೊಣಾಜೆಯ ನೆತ್ತಿಲಪದವು ಎಂಬಲ್ಲಿ ಆರೋಪಿಯನ್ನು ಬಂಧಿಸಿ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.





