March 18, 2026

ಸುಳ್ಯ:ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಅಂಗಡಿ: ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲು

0
IMG-20240120-WA0048.jpg



ಸುಳ್ಯ,:ಬೆಂಕಿಯ ಕೆನ್ನಾಲಿಗೆಗೆ ಅಂಗಡಿಯೊಂದು ಹೊತ್ತಿ ಉರಿದು ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಹಾನಿಯಾಗಿರುವ ಘಟನೆ ಸುಳ್ಯದ ಖಾಸಗಿ ಬಸ್ ಸ್ಟ್ಯಾಂಡ್ ಬಳಿಯಲ್ಲಿರುವ ಅಂಗಡಿಯೊಂದರಲ್ಲಿ ಜ. 20 ರಂದು ನಡೆದಿದೆ.

ಗೋಡಾನ್ ನಲ್ಲಿ ಹೊಗೆ ಕಂಡು ಬಂದ ಹಿನ್ನಲೆ ಅಂಗಡಿ ಮಾಲೀಕರು ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಅಂಗಡಿ ಮಾಲೀಕರು ಕೂಡಲೇ ಅಕ್ಕ – ಪಕ್ಕದ ಅಂಗಡಿಗಳಿಗೆ ಮಾಹಿತಿ ನೀಡಿದ್ದಾರೆ.

ಘಟನೆ ನಡೆದು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ನೂರಾರು ಜನ ಜಮಾಯಿಸಿದರು.

ಸ್ಥಳೀಯ ಅಂಗಡಿ ಮಾಲೀಕರು ಕೂಡ ಸ್ಥಳಕ್ಕಾಗಮಿಸಿ ಬೆಂಕಿ ಕಾಣಿಸಿ ಕೊಂಡ ಸ್ಥಳಕ್ಕೆ ತೆರಳಿ ನೀರು ಹಾಯಿಸುವ ನಂದಿಸುವ ಪ್ರಯತ್ನ ಮಾಡಿದರು. ಆದರೂ ಕೆಲವು ಬೆಲೆ ಬಾಳುವ ವಸ್ತುಗಳು ಅದಾಗಲೇ ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾಗಿದ್ದವು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!