December 20, 2025

ವಿಟ್ಲ: ಅಯೋಧ್ಯೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ವಿಹಿಂಪ ಮನವಿ

0
IMG-20240120-WA0040.jpg

ವಿಟ್ಲ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಸಂಭ್ರಮವನ್ನು ಮನೆಮನೆಗಳಲ್ಲಿ ಹಿಂದೂ ಬಾಂಧವರು ಆಚರಿಸಬೇಕು ಎಂದು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಮಂದಿರ ತಾಲೂಕು ಸಂಚಾಲಕ ಪದ್ಮನಾಭ ಕಟ್ಟೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಧ್ಯಾಹ್ನದ 12 ಗಂಟೆಯಿಂದ ಎರಡು ಗಂಟೆಯ ತನಕ ತಮ್ಮ ಅಂಗಡಿ ಮುಂಗಟ್ಟು ಇತರ ವ್ಯವಹಾರವನ್ನು ಸ್ಥಗಿತಗೊಳಿಸಿ ಊರಿನ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವಂತೆ ಮನವಿ ಮಾಡಿದರು.


ಬೆಳಗ್ಗಿನಿಂದಲೇ ತಮ್ಮ ಮನೆಗಳಲ್ಲಿ ವಾಹನಗಳಲ್ಲಿ ಶ್ರೀರಾಮನ ಭಾವಚಿತ್ರ ಇರುವ ಕೇಸರಿ ಧ್ವಜಗಳನ್ನು ಅಳವಡಿಸಬೇಕು.‌ ರಾತ್ರಿ ದೀಪಾವಳಿ ತರಹ ಮನೆಗಳಲ್ಲಿ ಕನಿಷ್ಠ ಐದು ದೀಪಗಳನ್ನು ಹಚ್ಚಬೇಕು ಎಂದವರು ವಿನಂತಿ ಮಾಡಿದರು‌.

ವಿಟ್ಲ ದೇವಸ್ಥಾನ ಮುಂಭಾದಲ್ಲಿ ಬೌಧ್ದಿಕ್, ರಾಮನ ಸಮತಾರಕ ಮಂತ್ರ ಪಠಣ ಇದೆ‌. ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಟ್ಲ ಮಂಡಲ ಪ್ರಮುಖ್ ರವಿಪ್ರಕಾಶ್ ಎಸ್., ವಿಟ್ಲ ಗ್ರಾಮ ಪ್ರಮುಖ್ ಸಿ. ಎಚ್.‌ಹರೀಶ್ ವಿಟ್ಲ ಪ್ರಖಂಡ ಬಜರಂಗದಳ ಸಂಚಾಲಕ ಚೇತನ್ ಕಡಂಬು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!