ಶಿವಮೊಗ್ಗ: ಬೈಕ್ ವೀಲಿಂಗ್: ಸ್ಟಂಟ್ ಮಾಡಿದರನ್ನು ಪತ್ತೆ ಹಚ್ಚಿ ದಂಡ ವಿಧಿಸಿದ ಪೊಲೀಸರು
ಶಿವಮೊಗ್ಗ : ಬೈಕ್ ವೀಲಿಂಗ್ ಮಾಡಿದವರಿಗೆ ಸಂಚಾರ ಪೊಲೀಸರು ಪುನಃ ಬಿಸಿ ಮುಟ್ಟಿಸಿದ್ದಾರೆ. ಸ್ಟಂಟ್ ಮಾಡಿದ ಮತ್ತಿಬ್ಬರನ್ನು ಪತ್ತೆ ಹಚ್ಚಿ ದಂಡ ವಿಧಿಸಿದ್ದಾರೆ.
ನಗರದ ಸೂಳೆಬೈಲು ಸಮೀಪ ಬೈಕ್ ವೀಲಿಂಗ್ ಮಾಡುತ್ತಿದ್ದ ಯುವಕನನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗಿದೆ. ರೇಸಿಂಗ್ ಅಂಡ್ ಟ್ರಯಲ್ ಆಫ್ ಸ್ಪೀಡ್, ನಂಬರ್ ಪ್ಲೇಟ್ ಇಲ್ಲದಿರುವುದು ಮತ್ತು ಹೆಲ್ಮೆಟ್ ಧರಿಸದಿರುವುದಕ್ಕೆ ದಂಡ ವಿಧಿಸಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಲಯ ಬೈಕ್ ಸವಾರನಿಗೆ 6 ಸಾವಿರ ರೂ. ದಂಡ ವಿಧಿಸಿದೆ.
ಗೋಪಿ ಸರ್ಕಲ್ ಸಮೀಪ ಬೈಕ್ ವೀಲಿಂಗ್ ಮಾಡಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಲಾಗಿತ್ತು. ರೇಸಿಂಗ್ ಅಂಡ್ ಟ್ರಯಲ್ ಆಫ್ ಸ್ಪೀಡ್ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ 5 ಸಾವಿರ ರೂ. ದಂಡ ವಿಧಿಸಿದೆ.
ಪಶ್ಚಿಮ ಸಂಚಾರ ಠಾಣೆ ಸಿಬ್ಬಂದಿ ಅಶೋಕ್, ನಾಸಿರ್ ಅಹಮ್ಮದ್, ದಿನೇಶ್, ಹರೀಶ್ ಅವರು ವೀಲಿಂಗ್ ಮಾಡಿದವರನ್ನು ಪತ್ತೆ ಹಚ್ಚಿದ್ದರು. ಪಿಎಸ್‌ಐ ತಿರುಮಲೇಶ್ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.





