ಉಪ್ಪಿನಂಗಡಿ: ಫೆ.1 ರಂದು ರಿಫಾಯಿ ಜುಮಾ ಮಸೀದಿ ಜೋಗಿಬೆಟ್ಟುನಲ್ಲಿ 9ನೇ ವಾರ್ಷಿಕ ರಿಫಾಯಿಯ ರಾತೀಬ್ ಮಜ್ಲಿಸ್:
ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ
ಉಪ್ಪಿನಂಗಡಿ: ರಿಫಾಯಿ ಜುಮಾ ಮಸೀದಿ ಜೋಗಿಬೆಟ್ಟುನಲ್ಲಿ 9ನೆ ವಾರ್ಷಿಕ ರಿಫಾಯಿಯ ರಾತೀಬ್ ಮಜ್ಲಿಸ್ ಫೆ. 1ರಂದು ನಡೆಯಲಿದ್ದು, ಇದರ ಪ್ರಯುಕ್ತ ರಿಫಾಯಿಯ ರಾತೀಬ್ ಮಜ್ಲಿಸ್ ನ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಶುಕ್ರವಾರ ನಡೆಯಿತು.
ಮಸೀದಿಯ ಅಧ್ಯಕ್ಷರಾದ ಯು.ಇ. ಝಕರಿಯಾ ಹಾಜಿ ಅಗ್ನಾಡಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಮಸೀದಿ ಖತೀಬು ಯು.ಕೆ ಖಲಂದರ್ ಮದನಿ, ಸ್ವಾಗತ ಸಮಿತಿಯ ಅಧ್ಯಕ್ಷ ಅಶ್ರಫ್ ಎಂಜಿ., ಕಾರ್ಯದರ್ಶಿಯರಾದ ಅಬ್ದುಲ್ ಕರೀಂ ಹಾಜಿ, ಹಮೀದ್ ಮುಸ್ಲಿಯಾರ್, ಮುಹಮ್ಮದ್ ಇಕ್ಬಾಲ್ ಮತ್ತು ಆಡಳಿತ ಕಮಿಟಿ ಸದಸ್ಯರಾದ ಯಾಕೂಬ್ ಹುಸೈನ್, ಅಯ್ಯೂಬ್ ಅಗ್ನಾಡಿ, ಹನೀಫ್ ಬನ್ನೆಂಗಳ, ಯಾಕೂಬ್ ಪಿಲಿಗೂಡು, ದಾವೂದ್ ಜಿ.ಕೆ, ರಝಾಕ್ ಮೇಲ್ಮನೆ ಹಾಗೂ ಜಮಾಅತ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ನೂರುಲ್ ಜಲಾಲಿಯ ಅಲ್ ಹಾಜ್ ಅಸ್ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಮತ್ತು ಸಯ್ಯದ್ ಕೆ.ಎಸ್ ಅಹಮ್ಮದ್ ಮುಖ್ತಾರ್ ತಂಙಳ್ ಕುಂಬೋಳ್ ನೇತೃತ್ವದಲ್ಲಿ ರಿಫಾಯಿಯ ರಾತೀಬು ನಡೆಯಲಿದೆ.





