December 20, 2025

ಕುಂದಾಪುರ: ಚಿನ್ನಾಭರಣವಿದ್ದ ಪರ್ಸ್‌ ಕಳವು ಪ್ರಕರಣ: ಹುಬ್ಬಳ್ಳಿಯಿಂದ ಇಬ್ಬರು ಮಹಿಳಾ ಆರೋಪಿಗಳ ಬಂಧನ

0
IMG-20240119-WA0003.jpg


 
ಕುಂದಾಪುರ: ದೇವಸ್ಥಾನಕ್ಕೆ ಹೋಗಿ ಬಂದಾಗ ವ್ಯಾನಿಟಿ ಬ್ಯಾಗಿನಲ್ಲಿದ್ದ ಸುಮಾರು 51.900 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಹಾಗೂ ಸುಮಾರು 4 ಗ್ರಾಂ ತೂಕದ ಚಿನ್ನದ ಉಂಗುರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರನ್ನು ಪೊಲೀಸರು ಹುಬ್ಬಳ್ಳಿಯಿಂದ ಬಂಧಿಸಿದ್ದಾರೆ.

ಲೋಕೇಶ್ ಮಂಜುನಾಥ ನಾಯ್ಕ ಅವರು ದೂರು ನೀಡಿದ್ದು, ಅವರ ಮಾವ ನಾರಾಯಣ ಅವರು ಲೋಕೇಶ್‌ ಅವರ ಮದುವೆಯ ಪ್ರಯುಕ್ತ 51.900 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಹಾಗೂ 4 ಗ್ರಾಂ ತೂಕದ ಚಿನ್ನದ ಉಂಗುರವನ್ನು ಖರೀದಿ ಮಾಡಿದ್ದು, ಚಿನ್ನಾಭರಣಗಳನ್ನು ಪರ್ಸಿನಲ್ಲಿ ತುಂಬಿಸಿ ಪತ್ನಿಯ ವ್ಯಾನಿಟಿ ಬ್ಯಾಗಿನಲ್ಲಿಟ್ಟು ಆನೆಗುಡ್ಡೆ ದೇವಸ್ಥಾನಕ್ಕೆ ತೆರಳಿದ್ದರು. ದೇವಸ್ಥಾನದ ಹೊರಗೆ ಬಂದು ನೋಡಿದಾಗ ವ್ಯಾನಿಟಿ ಬ್ಯಾಗ್‌ ಜಿಪ್‌ ತೆರೆದಿದ್ದು, ಬ್ಯಾಗಿನಲ್ಲಿದ್ದ ಚಿನ್ನ ಇಟ್ಟಿದ್ದ ಪರ್ಸ್‌ ಕಳವಾಗಿತ್ತು.

ಇನ್ನು ಕಳವಾದ ಚಿನ್ನಾಭರಣಗಳ ಮೊತ್ತ ಸುಮಾರು 3,75,000 ರೂಗಳಾಗಬಹುದು ಎಂಬುದಾಗಿ ಲೋಕೇಶ್ ಮಂಜುನಾಥ ನಾಯ್ಕ ದೂರು ನೀಡಿದಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದಲ್ಲಿನ ಆರೋಪಿಗಳ ಪತ್ತೆ ಬಗ್ಗೆ ಸ್ಥಳೀಯರ ಮಾಹಿತಿ, ಸಿಸಿಟಿವಿ ಮತ್ತು ಸಿಡಿಆರ್ ವಿಶ್ಲೇಷಣೆ ಮೂಲಕ ಆರೋಪಿಗಳಾದ ಶ್ರೀಮತಿ ಬೀಬಿಜಾನ್ ಶೇಖ್ ಮತ್ತು ಬೆಂಡಗೇರಿ ಶ್ರೀಮತಿ ಪಾರವ್ವ ಸಿಂಗನಹಳ್ಳಿ ಎಂಬವರನ್ನು ಹುಬ್ಬಳ್ಳಿಯ ಬೆಂಡಿಗೇರಿ ಎಂಬಲ್ಲಿ ಪತ್ತೆ ಮಾಡಿ ಆರೋಪಿಗಳಿಂದ ಕಳ್ಳತನವಾದ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನು ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ನೀಡಿದೆ.

ಕುಂದಾಪುರ ಪೊಲೀಸ್ ಠಾಣೆಯ ನಿರೀಕ್ಷಕರು ಆದ ಯು ಬಿ ನಂದಕುಮಾರ ರವರ ಮಾರ್ಗದರ್ಶನದಲ್ಲಿ, ಪಿ.ಎಸ್.ಐ ವಿನಯ ಕೊರ್ಲಹಳ್ಳಿ, ಪಿ.ಎಸ್.ಐ ಪ್ರಸಾದ ಕುಮಾರ್.ಕೆ ಹಾಗೂ ಸಿಬ್ಬಂದಿಯವರಾದ ಸಂತೋಷ ಕುಮಾರ್, ಶ್ರೀಧರ್, ರಾಮ ಪೂಜಾರಿ, ಪದ್ಮಾವತಿ, ಮೋನಿಕಾರವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!