ಬೆಂಗಳೂರಿನಲ್ಲಿ ಬೋಯಿಂಗ್ ಎಂಜಿನಿಯರ್ ಸೆಂಟರ್ ಉದ್ಘಾಟಸಿದ ಪ್ರಧಾನಿ ಮೋದಿ
ಬೆಂಗಳೂರು: ಭಾರತೀಯ ವಿಮಾನಯಾನದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಬೋಯಿಂಗ್ ಸುಕನ್ಯಾ ಕಾರ್ಯಕ್ರಮ ಹಾಗೂ ಅಮೆರಿಕದ ಹೊರಗೆ ಪ್ರಥಮ ಬಾರಿಗೆ ಬೋಯಿಂಗ್ ಅತಿದೊಡ್ಡ ಏರೋಸ್ಪೇಸ್ ಎಂಜಿನಿಯರಿಂಗ್ ಸೌಲಭ್ಯ ಸಿಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಬಿಐಇಟಿಸಿ ಕ್ಯಾಂಪಸ್ ಉದ್ಘಾಟಿಸಿದ್ದಾರೆ.
ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ವಾಯುಯಾನ ಭವಿಷ್ಯ ಸುಧಾರಣೆಗೆ ಎರಡು ಮಹತ್ವದ ಬೋಯಿಂಗ್ ಉಪಕ್ರಮಗಳ ಘೋಷಣೆ ಮಾಡಿದ್ದಾರೆ.
ಇನ್ನು ಬೋಯಿಂಗ್ ಸುಕನ್ಯಾ ಕಾರ್ಯಕ್ರಮವು ದೇಶದಲ್ಲಿ ಬೆಳೆಯುತ್ತಿರುವ ವಾಯುಯಾನ ಕ್ಷೇತ್ರಕ್ಕೆ ದೇಶದ ಹೆಣ್ಣು ಮಕ್ಕಳ ಪ್ರವೇಶವನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.
ಬೆಂಗಳೂರಿನ ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ (ಬಿಐಇಟಿಸಿ) ಕ್ಯಾಂಪಸ್‍ಗೆ 1,600 ಕೋಟಿ ರೂ.ಗಳನ್ನು ಹೂಡಲಾಗಿದೆ.”