ಅಪೂರ್ಣ ರಾಮಮಂದಿರ ಉದ್ಘಾಟನೆ ಧರ್ಮಶಾಸ್ತ್ರಕ್ಕೆ ಮಾಡುವ ಅಪಚಾರ: ಹಿಂದೂ ಮಹಾಸಭಾದ ಸಂಸ್ಥಾಪಕ ರಾಜೇಶ್ ಪವಿತ್ರನ್
ಮಂಗಳೂರು: ಅಯ್ಯೋಧೆಯಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್‍ಯಕ್ರಮದಲ್ಲಿ ಮೂಲ ವಕಾಲತ್ತುದಾರರಾದ ಹಿಂದೂ ಮಹಾಸಭಾ ಹಾಗೂ ನಿರ್ಮೂಯಿ ಅಖಾಡಕ್ಕೆ ಆಮಂತ್ರಣ ನೀಡದೇ ಪೂರ್ಣ ರೂಪದಲ್ಲಿ ಕೇಂದ್ರ ಸರಕಾರ ಕಡೆಗಣನೆ ಮಾಡುವ ಮೂಲಕ ಸ್ವಾರ್ಥದ ರಾಜಕಾರಣಕ್ಕೆ ನಾಂದಿ ಹಾಡಿದೆ ಎಂದು ಹಿಂದೂ ಮಹಾಸಭಾ ಕರ್ನಾಟಕದ ಸಂಸ್ಥಾಪಕ ರಾಜೇಶ್ ಪವಿತ್ರನ್ ಹೇಳಿದರು.
ಮಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಕೇಂದ್ರ ಸರಕಾರ ಲೋಕಸಭೆ ಚುನಾವಣಾ ದೃಷ್ಟಿಯಿಂದ ಪ್ರಭು ಶ್ರೀರಾಮನ ಮಂದಿರವನ್ನು ಅಪೂರ್ಣವಸ್ಥೆಯಲ್ಲಿ ಉದ್ಘಾಟನೆ ಮಾಡುವುದು ಧರ್ಮಶಾಸ್ತ್ರಕ್ಕೆ ಮಾಡುವ ಅಪಚಾರ. ಇದನ್ನು ಹಿಂದೂ ಮಹಾಸಭಾ ಖಂಡಿಸುತ್ತದೆ ಎಂದರು.





