ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸತೀಶ್ ಕುಂಪಲ ಆಯ್ಕೆ
ಬಂಟ್ವಾಳ: ದ.ಕ.ಜಿಲ್ಲೆಯ ಬಿಜೆಪಿ ಅಧ್ಯಕ್ಷರಾಗಿ ಬಿಲ್ಲವ ಸಮುದಾಯದ ಯುವ ನಾಯಕ ಸತೀಶ್ ಕುಂಪಲ ಅವರನ್ನು ನೇಮಕ ಮಾಡಿ ರಾಜ್ಯ ಬಿಜೆಪಿ ಆದೇಶ ಹೊರಡಿಸಿದೆ.
ಲೋಕಸಭಾ ಚುನಾವಣೆ ಸಮೀಪ ಬರುತ್ತಿದ್ದಂತೆ ಅವಧಿ ಮುಗಿದ ಜಿಲ್ಲಾವಾರು ಹೊಸ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.
ಈ ಬಾರಿ ಮತ್ತೆ ಜಿಲ್ಲೆಯ ನಾಯಕ ಸ್ಥಾನವನ್ನು ಬಿಲ್ಲವ ಸಮುದಾಯಕ್ಕೆ ನೀಡಿದ ರಾಜ್ಯ ಬಿಜೆಪಿ, ಬಿಲ್ಲವ ಸಮುದಾಯದ ಮತದ ಮೇಲೆ ಲೆಕ್ಕಾಚಾರ ಮಾಡಿದೆ ಎಂಬುದು ಕಂಡು ಬಂದಿದೆ.
ಪ್ರಸ್ತುತ ಮೂಡಬಿದಿರೆಯ ಸುದರ್ಶನ ಮೂಡಬಿದಿರೆ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಅಧ್ಯಕ್ಷರ ಬದಲಾವಣೆ ನಡೆದಿದೆ.
ಜಿಲ್ಲೆಯ ಪದಾಧಿಕಾರಿಗಳ ಆಯ್ಕೆಯಾದ ಕೂಡಲೇ ಮಂಡಲಗಳ ಪದಾಧಿಕಾರಿಗಳ ಆಯ್ಕೆ ಶೀಘ್ರವಾಗಿ ನಡೆಯಲಿದೆ ಎಂದು ಹೇಳಲಾಗಿದೆ.
ಸತೀಶ್ ಕುಂಪಲ ಅವರು ಕಳೆದ ಬಾರಿ ಮಂಗಳೂರು ಕ್ಷೇತ್ರದಲ್ಲಿ ಸ್ಪೀಕರ್ ಯು.ಟಿ.ಖಾದರ್ ವಿರುದ್ದ ಸ್ಪರ್ಧಿಸಿ ಪರಾಜಯಗೊಂಡಿದ್ದರು.






