September 26, 2026

ಹೈದರಾಬಾದ್: ಹಳಿ ತಪ್ಪಿದ ಚಾರ್ ಮಿನಾರ್ ಎಕ್ಸ್ ಪ್ರೆಸ್‌ ರೈಲು:
ಐವರು ಪ್ರಯಾಣಿಕರಿಗೆ ಗಾಯ

0
images.jpeg

ಹೈದರಾಬಾದ್: ಚಾರ್ ಮಿನಾರ್ ಎಕ್ಸ್ ಪ್ರೆಸ್ ರೈಲು ಬುಧವಾರ ಬೆಳಿಗ್ಗೆ ನಾಂಪಲ್ಲಿ ರೈಲ್ವೆ ನಿಲ್ದಾಣದಲ್ಲಿ ಹಳಿ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ.

ಚೆನ್ನೈನಿಂದ ಹೈದರಾಬಾದ್ ಗೆ ಬರುತ್ತಿದ್ದ ಚಾರ್ ಮಿನಾರ್ ಎಕ್ಸ್ ಪ್ರೆಸ್ ರೈಲು ಡೆಡ್ ಎಂಡ್ ಲೈನ್ ಬಗ್ಗೆ ಗಮನ ಹರಿಸದ ಕಾರಣ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಬುಧವಾರ ಬೆಳಗ್ಗೆ 9:15ರ ಸುಮಾರಿಗೆ ಚೆನ್ನೈನಿಂದ ಬರುತ್ತಿದ್ದ ರೈಲು ನಿಲ್ದಾಣದ ಟರ್ಮಿನಲ್ ತಲುಪುತ್ತಿದ್ದಂತೆ, ನಿಲ್ಲಿಸಲು ಕ್ಷಣ ಮಾತ್ರ ಬಾಕಿಯಿರುವಾಗ ಈ ಘಟನೆ ನಡೆದಿದೆ. ಹಳಿ ತಪ್ಪಿದ ಘಟನೆಯಲ್ಲಿ ಐವರು ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಲಾಲಗುಡ ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಗಿದೆ.

 

Leave a Reply

Your email address will not be published. Required fields are marked *

You may have missed

error: Content is protected !!