ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನಾಪತ್ತೆ
ಮಂಗಳೂರು: ತನ್ನ ಕುಟುಂಬದವರೊಂದಿಗೆ ವಾಸವಾಗಿದ್ದ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಪಕ್ಕದ ಜಿಲ್ಲೆಗೆ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದವಳು, ಕಾಣೆಯಾದ ಘಟನೆ ಘಟನೆ ತಾಲೂಕಿನ ಬಳಳೆ ಮಾದನಗೇರಿ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಬಳಲೆ ನಿವಾಸಿ ಪ್ರೀತಿ ಶ್ರೀನಿವಾಸ ನಾಯ್ಕ (21) ಕಾಣೆಯಾದ ಯುವತಿಯಾಗಿದ್ದಾಳೆ.
ಮಂಗಳೂರಿನಲ್ಲಿ ಪ್ಯಾರಾ ಮೆಡಿಕಲ್ ಓದುತ್ತಿದ್ದವಳು, ಕಳೆದ 3 ತಿಂಗಳ ಹಿಂದೆ ಕಾಲೇಜ್ ಬಿಟ್ಟು ಮನೆಯಲ್ಲಿಯೇ ಬಂದು ಇದ್ದವಳು. ದಿನಾಂಕ 17-11-2023 ರಂದು ಬೆಳಿಗ್ಗೆ 6.00 ಘಂಟೆಗೆ ಉಡುಪಿಗೆ ಕೆಲಸಕ್ಕೆ ಹೋಗುತ್ತೇನೆ ಅಂತಾ ಮನೆಯಲ್ಲಿ ಹೇಳಿ, ಅಂಕೋಲಾ ತಾಲೂಕಿನ ಬಳಲೆ – ಮಾದನಗೇರಿಯಲ್ಲಿರುವ ತನ್ನ ಮನೆಯಿಂದ ಹೋದವಳು ಇದುವರೆಗೂ ವಾಪಸ್ ಮನೆಗೆ ಬಾರದೇ, ಫೋನ್ ಸಂಪರ್ಕಕ್ಕೂ ಸಿಗದೇ ನಡುವಿನ ಅವಧಿಯಲ್ಲಿ ಎಲ್ಲಿಗೋ ಹೋಗಿ ಕಾಣೆಯಾಗಿದ್ದಾಳೆ ಎಂದು, ಕಾಣೆಯಾದ ಪ್ರೀತಿ ಇವಳ ತಾಯಿ ಮಾದೇವಿ ಶ್ರೀನಿವಾಸ ನಾಯ್ಕ ಎನ್ನುವವರು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.





